Current AffairsSpardha Times

ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ, ಏನಿದರ ವಿಶೇಷತೆಗಳು..?

Share With Friends

ಯುನೈಟೆಡ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವು ಪೂರ್ಣಗೊಂಡಿದೆ. ಈ ದೇವಾಲಯವು ತುಂಬಾ ಸುಂದರವಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಪ್ರಧಾನಿ ಮೋದಿ ಅವರು ಫೆಬ್ರವರಿ 14 ರಂದು ಉದ್ಘಾಟಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದು, ಈ ಯಸಂದರ್ಭದಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. 2015 ರಿಂದ ಯುಎಇಗೆ ಪ್ರಧಾನಿ ಮೋದಿ ಅವರ ಏಳನೇ ಭೇಟಿ ಇದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.

ದೇವಾಲಯದ ಕಾಲಚಕ್ರ:
✦ ಮಧ್ಯಪ್ರಾಚ್ಯದಲ್ಲಿ ಕಲ್ಲಿನಿಂದ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯವಲ್ಲದೆ, ಬಾಪ್ಸ್ ಹಿಂದೂ ಮಂದಿರ (BAPS) ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಎಂಬ ಖ್ಯಾತಿಯನ್ನು ಹೊಂದಿದೆ.

✦ ಏಪ್ರಿಲ್ 5, 1997 : ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ನಿರ್ಮಿಸುವ ಕಲ್ಪನೆಯನ್ನು ಹೊಂದಿದ್ದರು. ಇದು ಬಾಪ್ಸ್ ಹಿಂದೂ ಮಂದಿರದ ಆರಂಭವಾಗಿತ್ತು.

✦ 1997ರಲ್ಲಿ ಮರಳುಗಾಡಿನ ದೇಶದಲ್ಲಿ ಸ್ವಾಮಿ ಮಹಾರಾಜರು ಅಬುಧಾಬಿಯಲ್ಲಿ ಒಂದು ಹಿಂದೂ ಮಂದಿರವನ್ನು ನಿರ್ಮಾಣ ಮಾಡಬೇಕೆಂದು ಬಯಸಿದ್ದರು. ಅಬುದಾಭಿಯಲ್ಲಿ ಹಿಂದೂ ದೇವಾಲಯ ನಿರ್ಮಾಣವಾದರೆ, ಶ್ರೀಮಂತ ಸಂಸ್ಕೃತಿ, ಸಮುದಾಯಗಳು, ಧರ್ಮಗಳು ರಾಷ್ಟ್ರದಲ್ಲಿ ನೆಲೆಸಲಿದೆ ಎಂದು ಮೊದಲ ಬಾರಿಗೆ ಭಾವಿಸಿದ್ದರು.

✦ 2015ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಈ ದೇವಾಲಯ ನಿರ್ಮಾಣ ಕಾರ್ಯಕ್ಕೆ ಹೊಸ ಹುರುಪು ಬಂದಿತು. ಮೋದಿ ಅವರ ಮೊದಲ ಯುಎಇ ಭೇಟಿಯಲ್ಲೇ ಅಬುಧಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಜಾಗ ನೀಡಲು ಯುಎಇ ನಿರ್ಧರಿಸಿತು. ಮೋದಿ ಇಂದಿರಾ ಗಾಂಧಿ ಹೊರತುಪಡಿಸಿ ಅರಭ್ ದೇಶಕ್ಕೆ ಕಾಲಿಟ್ಟ ಮೊದಲ ಪ್ರಧಾನಿಯಾಗಿದ್ದರು.

✦ 2018 ಫೆಬ್ರವರಿ 10 : ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಿಂದೂ ದೇವಾಲಯ ಮತ್ತು ಸಾಂಸ್ಕೃತಿ ಸಂಕೀರ್ಣ ನಿರ್ಮಾಣ ಮಾಡಲು ಭೂಮಿಯನ್ನ ಉಡುಗೊರೆಯಾಗಿ ನೀಡಿದರು.

ಏಪ್ರಿಲ್ 20, 2019 : ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಬಿಎಪಿಎಸ್​ನ ಆಧ್ಯಾತ್ಮ ಗುರು ಮಹಂತ್ ಸ್ವಾಮಿ ಮಹಾರಾಜ್ ಅವರು ಈ ಅಡಿಪಾಯ ಕಾರ್ಯಕ್ರಮ ನೆರೆವೇರಿಸಿದರು.

ನವೆಂಬರ್ 6, 2019; ಬಿಎಪಿಎಸ್ ಅಬುಧಾಬಿ​ ಹಿಂದೂ ದೇವಾಲಯ ಮ್ಯಾಕಾನಿಕಲ್ ಪ್ರಾಜೆಕ್ಟ್ ಆಫ್​ ದ ಇಯರ್ ಪ್ರಶಸ್ತಿ ಪಡೆದುಕೊಂಡಿತು. ಇದಕ್ಕೂ ಮುನ್ನ ದುಬೈ ಒಪೆರಾ, ಖಲೀಫ ವಿಶ್ವವಿದ್ಯಾಲಯ, ದುಬೈ ಟ್ರೇಡ್ ಸೆಂಟರ್ ಈ ಪ್ರಶಸ್ತಿ ಪಡೆದುಕೊಂಡಿದ್ದವು.

ಆಗಸ್ಟ್ 19, 2021 ;ಈ ಬೃಹತ್​ ದೇವಾಲಯಕ್ಕೆ ಮೊದಲ ಕೆತ್ತಿದ ಕಲ್ಲು ಭಾರತದಿಂದ ಅಬುದಾಭಿಗೆ ಬಂದಿತು. ಬಿಎಪಿಎಸ್​ ಅಂತಾರಾಷ್ಟ್ರೀಯ ಸಂಚಾಲಯಕರಾದ ಈಶ್ವರಚಂದ್ರ ಸ್ವಾಮಿ ಇದನ್ನು ಪೂಜಿಸಿದ್ದರು.

ನವೆಂಬರ್ 9, 2021; ಮಂದಿರ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ಪವಿತ್ರಗೊಳಿಸುವ ಒಂದು ವಾರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಹಾಗೂ ಸ್ವಯಂ ಸೇವರು ಭಾಗಿಯಾಗಿದ್ದರು.

20 ಅಕ್ಟೋಬರ್ 2023: ದೇವಾಲಯದ ಸಂಪೂರ್ಣ ನಿರ್ಮಾಣ ಕಾರ್ಯ ಮುಗಿದಿತ್ತು. ಈಶ್ವರಚಂದ್ರ ಸ್ವಾಮಿ ಏಳು ಗೋಪುರಗಳಿಗೆ ಪೂಜೆ ಸಲ್ಲಿಸಿದರು.

29 ನವೆಂಬರ್ 2023: ಪವಿತ್ರ ಮಹಂತ್ ಸ್ವಾಮಿ ಮಹಾರಾಜರು ಗೋಪುರಗಳ ಮೇಲೆ ಇರಿಸುವ ಕಲಶಗಳು, ಧ್ವಜಗಳು ಮತ್ತು ಧ್ವಜಸ್ತಂಭಗಳು ವಿಶೇಷ ಪೂಜೆ ಸಲ್ಲಿಸಿದರು.

2024 ಫೆಬ್ರವರಿ 2024: ಮಹಂತ ಸ್ವಾಮಿ ಮಹಾರಾಜರ ನೇತೃತ್ವದಲ್ಲಿ ದೇವಾಲಯದ ದೈವಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಅಬುಧಾಬಿ ಹಿಂದೂ ದೇವಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ.

✦ ದೇವಾಲಯದ ನಿರ್ಮಾಣವು ಸಂಪೂರ್ಣವಾಗಿ ಭಾರತೀಯ ಶೈಲಿಯಲ್ಲಿದೆ. ಇದಕ್ಕಾಗಿ 3000 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಮಿಶ್ರಣವನ್ನು ಬಳಸಲಾಗಿದೆ. ದೇವಾಲಯದ ನಿರ್ಮಾಣ ಕಾರ್ಯಗಳು ಡಿಸೆಂಬರ್ 2019 ರಲ್ಲಿ ಪ್ರಾರಂಭವಾಗಿತ್ತು.

ದೇವಾಲಯದ ವಿಶೇಷತೆಗಳೇನು..?
✦ ಸುಮಾರು 27 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ದೇವಾಲಯ ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಲಿದೆ. ಸೌಹಾರ್ಧತೆಯ ಪ್ರತೀಕವಾಗಲಿರುವ ಈ ದೇವಾಲಯ ಭಾರತ ಮತ್ತು ಯುಎಇ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಸುಮಾರು 700 ಕೋಟಿ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದೆ.

✦ ದೇವಾಲಯಕ್ಕೆ ಸಂಬಂಧಿಸಿದಂತೆ ದೇಶದ ಏಳು ಎಮಿರೇಟ್‌ಗಳನ್ನು ಪ್ರತಿನಿಧಿಸುವ ಏಳು ಮಿನಾರ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ದೇವಾಲಯವನ್ನು ನಿರ್ಮಿಸಲು ಉತ್ತರ ರಾಜಸ್ಥಾನದಿಂದ ಅಬುಧಾಬಿಯವರೆಗೆ ಗುಲಾಬಿ ಕಲ್ಲು ಬಳಸಲಾಗಿದೆಯಂತೆ. ಈ ಕಾರಣದಿಂದಾಗಿ, ಯುಎಇಯಲ್ಲಿನ ತೀವ್ರ ಶಾಖವು ಈ ದೇವಾಲಯಕ್ಕೆ ಹಾನಿ ಮಾಡುವುದಿಲ್ಲ ಎಂದು ತಿಳಿದು ಬಂದಿದೆ.

✦ ಈ ದೇವಾಲಯವು ಸುಮಾರು ಎತ್ತರ 108 ಅಡಿ ಇದೆ. ಇದರಲ್ಲಿ 40 ಸಾವಿರ ಘನ ಮೀಟರ್ ಅಮೃತಶಿಲೆ ಮತ್ತು 180 ಸಾವಿರ ಘನ ಮೀಟರ್ ಮರಳುಗಲ್ಲುಗಳನ್ನು ಬಳಕೆ ಮಾಡಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಟರಾದ ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ 50,000 ಕ್ಕೂ ಹೆಚ್ಚು ಜನರು ದೇವಾಲಯದ ನಿರ್ಮಾಣದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

✦ ಈ ದೇವಾಲಯವನ್ನು ನಿರ್ಮಿಸಲು ವೈದಿಕ ವಾಸ್ತುಶೈಲಿಯನ್ನು ಬಳಸಲಾಗಿದೆ. ದೇವಾಲಯವನ್ನು ಪ್ರವೇಶಿಸಿದಾಗ ಗಮನ ಸೆಳೆಯುವ ಮೊದಲ ವಿಷಯವೆಂದರೆ ಏಳು ಎಮಿರೇಟ್ಸ್‌ನ ಮರಳಿನಿಂದ ಮಾಡಿದ ಆಕರ್ಷಕ ದಿಬ್ಬಗಳು. 1997 ರಲ್ಲಿ ಶಾರ್ಜಾದ ಮರುಭೂಮಿಯ ಮಧ್ಯದಲ್ಲಿ ವಾಸಿಸುತ್ತಿರುವಾಗ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸಲು ಬಯಸಿದ ಸಂಸ್ಥೆಯ ದಿವಂಗತ ಆಧ್ಯಾತ್ಮಿಕ ನಾಯಕರಾದ ಪರಮಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ದೂರದೃಷ್ಟಿಯ ಗೌರವಾರ್ಥವಾಗಿ ಇದನ್ನು ಸ್ಥಾಪಿಸಲಾಗಿದೆಯಂತೆ.

✦ ಇತರ ದೇವಾಲಯಗಳಿಗಿಂತ ಭಿನ್ನವಾಗಿ, ಅಬುಧಾಬಿಯಲ್ಲಿರುವ ಈ ದೇವಾಲಯವು ಎಲ್ಲಾ ಧರ್ಮಗಳಿಗೂ ತೆರೆದಿರುತ್ತದೆ. ಸ್ವಾಮಿ ನಾರಾಯಣ ಸಂಸ್ಥೆ(BAPS) ಹಿಂದೂ ದೇವಾಲಯವು ಮಧ್ಯಪ್ರಾಚ್ಯದ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವಾಗಲಿದೆ. ಅಬು ಮುರೀಕಾ ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ಭವ್ಯವಾದ ರಚನೆಯು ಭಾರತ ಮತ್ತು ಯುಎಇ ನಡುವಿನ ನಿರಂತರ ಸ್ನೇಹಕ್ಕೆ ಸಾಕ್ಷಿಯಾಗಿದೆ, ಇದು ಸಾಂಸ್ಕೃತಿಕ ಸಾಮರಸ್ಯ ಮತ್ತು ಸಹಕಾರದ ಮನೋಭಾವವನ್ನು ಸಂಕೇತಿಸುತ್ತದೆ.

ಮಹಂತ್​ ಸ್ವಾಮಿ ಮಹಾರಾಜ್​ ಪರಿಚಯ:

Mahant Swami Maharaj


ಮಹಂತ್ ಸ್ವಾಮಿ ಮಹಾರಾಜ್ ಅವರು BAPS ಸ್ವಾಮಿನಾರಾಯಣ ಸಂಸ್ಥೆಯ ಆರನೇ ಮತ್ತು ಪ್ರಸ್ತುತ ಆಧ್ಯಾತ್ಮಿಕ ಗುರು. 20 ಜುಲೈ 2012 ರಂದು ಹಿರಿಯ ಸಾಧುಗಳ ಸಮ್ಮುಖದಲ್ಲಿ ಮಹಂತ್ ಸ್ವಾಮಿ ಮಹಾರಾಜ್ ಅವರನ್ನು BAPS ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯ ಈವ್ ಗುರು ಎಂದು ಘೋಷಿಸಲಾಯಿತು. 13 ಆಗಸ್ಟ್ 2016 ರಂದು, ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಅಕಾಲಿಕ ನಿರ್ಗಮನದ ನಂತರ ಮಹಂತ್ ಸ್ವಾಮಿನಾರಾಯಣ್ ಆರನೇ ಗುರುಗಳಾಗಿ ಆಯ್ಕೆ ಆದರು.

ಮಹಂತ್ ಸ್ವಾಮಿ ಮಹಾರಾಜ್ ಅವರು 500 ಕ್ಕೂ ಹೆಚ್ಚು ಸ್ವಾಮಿನಾರಾಯಣ ದೇವಾಲಯಗಳು, ಗುರುಕುಲಗಳು ಮತ್ತು ಆಸ್ಪತ್ರೆಗಳನ್ನು ಬಹಳ ಕಡಿಮೆ ಸಮಯದಲ್ಲಿ ನಿರ್ಮಿಸಿ ಗಮನ ಸೆಳೆದಿದ್ದಾರೆ. ಅವರ ನಾಯಕತ್ವದಲ್ಲಿ BAPS (Bochasanwasi Akshar Purushottam Swaminarayan Sanstha) ಸ್ವಾಮಿನಾರಾಯಣ ಸಂಸ್ಥೆಯು ಪ್ರಸ್ತುತ ರಾಬಿನ್ಸ್ವಿಲ್ಲೆ, USA ನಲ್ಲಿ ಸ್ವಾಮಿನಾರಾಯಣ ಅಕ್ಷರಧಾಮ ಮತ್ತು ಅಬುಧಾಬಿಯಲ್ಲಿ ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿ ಗಮನ ಸೆಳೆದಿದೆ.

ವೇದಗಳು ಮತ್ತು ವೇದ ಕಾಲದ ನಾಗರಿಕತೆ

Leave a Reply

Your email address will not be published. Required fields are marked *

error: Content Copyright protected !!