GKHistorySpardha Times

ಹಿರೋಶಿಮಾ-ನಾಗಾಸಾಕಿ ಅಣುಬಾಂಬ್ ದುರಂತ ಕಥೆ

Share With Friends

ಸೂರ್ಯ ಉದಯಿಸುವ ನಾಡೆಂದು ಖ್ಯಾತವಾದ ಜಪಾನ್ ದೇಶವು ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ. ಆದರೂ ಜಪಾನ್ ಪ್ರಕೃತಿ ವಿಕೋಪಗಳನ್ನು ನಿಭಾಯಿಸುತ್ತಾ ಮಾಡುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದರೆ 1945 ಆಗಸ್ಟ್ 6, ಆಗಸ್ಟ್ 9ರಲ್ಲಿನಡೆದ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ನಡೆದ ಪರಮಾಣು ದಾಳಿ ದುರಂತಗಳು ಜಪಾನಿನ ಮೇಲೆ ತನ್ನದೇ ಆದ ದುಷ್ಪರಿಣಾಮವನ್ನು ಬೀರುತ್ತಿದೆ.

ಅನೇಕ ದಶಕಗಳೇ ಕಳೆದರೂ ಕೂಡ ಜಪಾನ್ ದೇಶವು ಈ ದುರಂತದ ಪರಿಣಾಮದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಜಪಾನ್‌ನ ಪ್ರಮುಖ ನಗರಗಳಾದ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ನಡೆದ ಅಣು ಬಾಂಬ್ ದುರಂತವು ಇಂದಿಗೂ ಕೂಡ ಮನುಕುಲಕ್ಕೆ ಆತಂಕದ ಘಟನೆಯಾಗಿದೆ.

ಹಿರೋಶಿಮಾ ಅಣು ಬಾಂಬ್ ದುರಂತ 2ನೇ ಮಹಾಯುದ್ಧದ ಕೊನೆಯ ಹಂತದಲ್ಲಿದ್ದಾಗ ಅಮೇರಿಕಾದ ವಾಯುಪಡೆಯು ಜಪಾನ್ ದೇಶವನ್ನು ಧ್ವಂಸ ಮಾಡಲು “ಲಿಟ್ಲಲ್ ಬಾಯ್” ಎಂಬ ಅಣುಬಾಂಬ್‌ನ್ನು ಜಪಾನ್‌ನ ನಗರವಾದ ಹಿರೋಶಿಮಾದ ಮೇಲೆ ಆಗಸ್ಟ್ 6, 1945ರಂದು ಹಾಕಿತ್ತು.

ಇದರಿಂದ ಹಿರೋಶಿಮಾ ನಗರದಲ್ಲಿ 90,000 ದಿಂದ 1,66,000ಮಂದಿ  ಸಾವನ್ನಪ್ಪಿದರು. ಈ ಮೂಲಕ ಹಿರೋಶಿಮಾ ನಗರವು ಮೊಟ್ಟ ಮೊದಲ ಬಾರಿಗೆ ಬಾಂಬ್ ದಾಳಿಯಿಂದ ಧ್ವಂಸಗೊಂಡ ಜಗತ್ತಿನ ಮೊದಲ ನಗರವಾಯಿತು.

ನಾಗಸಾಕಿ ಅಣು ಬಾಂಬ್ ದುರಂತ ನಾಗಸಾಕಿ ನಗರವು ಜಪಾನ್ ದೇಶದ ನಗರವಾಗಿದ್ದು, ಈ ನಗರದ ಮೇಲೆ ಅಮೇರಿಕಾ ನೌಕಾಪಡೆಯು ಆಗಸ್ಟ್ 9, 1945ರಂದು “ಫ್ಯಾಟ್‌ಮ್ಯಾನ್” ಎಂಬ ಹೆಸರಿನ ಅಣು ಬಾಂಬ್‌ನ್ನು ಹಾಕಿತು. ಈ ಅಣು ಬಾಂಬ್ ಸ್ಫೋಟದಿಂದ ನಾಗಸಾಕಿ ನಗರದಲ್ಲಿ 60,000 ದಿಂದ 80,000ಮಂದಿ ಸಾವನ್ನಪ್ಪಿದರು.

ಇದು ಅಣು ದಾಳಿಗೆ ಸಿಲುಕಿದ್ದ ಜಗತ್ತಿನ 2ನೇ ನಗರವಾಗಿದೆ. ಹಿರೋಶಿಮಾ & ನಾಗಸಾಕಿ ನಗರಗಳು ಬಾಂಬ್ ದಾಳಿಗೆ ಸಿಲುಕಿ 67 ವರ್ಷಗಳಾದರೂ ಕೂಡ ಬಾಂಬ್ ದಾಳಿಯ ದುಷ್ಪರಿಣಾಮಗಳು ಇನ್ನೂ ಜೀವಂತವಾಗಿವೆ.

✦ಜಪಾನ್ ಸೂರ್ಯ ಉದಯಿಸುವ ನಾಡೆಂದು ಬ್ಯಾತವಾಗಿದೆ.   ಜಪಾನ್ ಪೂರ್ವ ಏಷ್ಯಾದ ದ್ವೀಪರಾಷ್ಟ್ರವಾಗಿದೆ. ಜಪಾನ್ 6852 ದ್ವೀಪಗಳನ್ನು ಒಳಗೊಂಡಿದೆ. ಇದು ಫೆಸಿಫಿಕ್ ಸಾಗರದಲ್ಲಿ ಕಂಡು ಬರುವ ದ್ವೀಪ ರಾಷ್ಟ್ರವಾಗಿದೆ.

✦ಜಪಾನ್ ದೇಶವು ಅನೇಕ ಪ್ರಥಮಗಳನ್ನು ಸಾಧಿಸಿದೆ. ಇತ್ತೀಚಿನ ವರದಿಯಂತೆ ಜಪಾನ್ ದೇಶವು ಜೀವಿತಾವಧಿಯು ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದೆ. ಈ ಮೊದಲು ಮೊದಲ ಸ್ಥಾನದಲ್ಲಿತ್ತು, ಆದರೆ ಸುನಾಮಿ, ಭೂಕಂಪಗಳಿಂದ ಜೀವಿತಾವಧಿಯು ಕಡಿಮೆಯಾಗಿದೆ. ಜಪಾನ್ ದೇಶದ ರಾಜಧಾನಿ ಟೋಕಿಯೋ.

✦ಜಪಾನ್ ದೇಶದ ಸಂಸತ್ತನ್ನು ಡಯಟ್ ಎಂದು  ಕರೆಯುತ್ತಾರೆ. ಜಪಾನ್ ದೇಶದಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕವು ಕೂಡ ಅತಿ ಹೆಚ್ಚಾಗಿದ್ದು, ಜಗತ್ತಿನಲ್ಲಿ  12ನೇ ಸ್ಥಾನದಲ್ಲಿದೆ. ಜಪಾನ್ ದೇಶದ ನಾಣ್ಯ  ಯೆನ್.

✦ಇದು 12 ಕೋಟಿ ಜನಸಂಖ್ಯೆಯನ್ನು ಹೊಂದಿದೆ.  ಜಪಾನಿನ್ ಆಟೋಮೊಬೈಲ್ ಕ್ಷೇತ್ರದಲ್ಲಿ ಜಗತ್ತಿನಲ್ಲಿ  2ನೇ ಸ್ಥಾನವನ್ನು ಹೊಂದಿದೆ. ಜಪಾನ್‌ನ ಅನೇಕ ಬಾರಿ ಭೂಕಂಪ ಮತ್ತು ಸುನಾಮಿಗೆ ತುತ್ತಾಗಿದೆ.

✦ಇತ್ತೀಚೆಗೆ ಮಾರ್ಚ್.11, 2011ರಲ್ಲಿ ಜಪಾನ್‌ನಲ್ಲಿ  ಭೂಕಂಪದ ಪರಿಣಾಮವಾಗಿ ಸುನಾಮಿ ಉಂಟಾಗಿ ಫುಕುಶಿಮಾ ಪರಮಾಣು ಕ್ರಿಯಾಕಾರಿ ಘಟಕಕ್ಕೆ ಅನಾಹುತ ಉಂಟಾಗಿತ್ತು. ಇದೊಂದು ಜಗತ್ತಿನ  ಅತಿ ದೊಡ್ಡ ಪರಮಾಣು ದುರಂತವೆಂದು
ಹೇಳಲಾಗಿದೆ.

✦ಜಪಾನ್ ದೇಶವು ಜಿ-8, ಅಪೆಕ್  &  ಏಷಿಯನ್+3 ರಾಷ್ಟ್ರಗಳ ಸದಸ್ಯತ್ವವನ್ನು ಪಡೆದಿದೆ.  ಜಪಾನ್ ದೇಶದ ಕ್ಯಾಟೊನಲ್ಲಿ ಡಿಸೆಂಬರ್. 11,   1997ರಲ್ಲಿ ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದಂತೆ  ಪರಿಸರ ಒಪ್ಪಂದವಾದ ಕ್ಯಾಟೊ ಪ್ರೋಟೋಕಾಲ್‌ಗೆ ಜಗತ್ತಿನ 191 ದೇಶಗಳು ಸಹಿ ಹಾಕಿವೆ. ಜಪಾನ್ ದೇಶವು ವಿವಿಧ ಕ್ಷೇತ್ರಗಳಲ್ಲಿ 15 ನೊಬೆಲ್ ಪ್ರಶಸ್ತಿಯನ್ನು ಪಡೆದಿದೆ.

Leave a Reply

Your email address will not be published. Required fields are marked *

error: Content Copyright protected !!