AwardsGKSpardha Times

ನೊಬೆಲ್ ಪ್ರಶಸ್ತಿ

Share With Friends

✦ನೊಬೆಲ್ ಪ್ರಶಸ್ತಿ ವಿಶ್ವದ ಒಂದು ಸರ್ವಶ್ರೇಷ್ಠ ಪ್ರಶಸ್ತಿಯಾಗಿದೆ.
✦ಡೈನಮೈಟ್ ಸಂಶೋಧಕ, ವಿಖ್ಯಾತ ವಿಜ್ಞಾನಿ ಸ್ವೀಡನ್ನಿನ “ಆಲ್ಪ್ರೇಡ್ ನೋಬೆಲ್” ಹೆಸರಿನಲ್ಲಿ ಆತನು ಬರೆದಿಟ್ಟ ಉಯಿಲಿನಂತೆ ವಿಜ್ಞಾನ, ಸಾಹಿತ್ಯ, ಮತ್ತು ಶಾಂತಿ ವಿಭಾಗಗಳಲ್ಲಿನ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಲಾಗುತ್ತಿದೆ.
✦ಶಾಂತಿ , ಸಾಹಿತ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರಗಳಿಗೆ 1901 ರಿಂದ ನೊಬೆಲ್ ಪುರಸ್ಕಾರ ನೀಡಲಾಗುತ್ತಿದೆ.
✦ಅರ್ಥಶಾಸ್ತ್ರಕ್ಕಾಗಿ 1969ರಿಂದ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.
✦ಪ್ರಶಸ್ತಿಯ ಮೊತ್ತ 250 ಸ್ವೀಡಿಷ್ ಕ್ರೋನರ್( 6.5 ಕೋಟಿ) ನಗದು, ಬಹುಮಾನದ ಮೊತ್ತವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತದೆ.

✦ಪ್ರಶಸ್ತಿಯ ಹಿನ್ನೆಲೆ
ಆಲ್ಫ್ರೇಡ್ ನೊಬೆಲ್ “ಡೈನಮೈಟ್” ಎಂಬ ವಿಸ್ಫೋಟಕದ ಜನಕ. ಈ ವಿಸ್ಫೋಟಕವು ಯುದ್ಧಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು-ನೋವುಗಳಿಂದ ವಿಚಲಿತಗೊಂಡು, 1895ರಲ್ಲಿ ತನ್ನ ಸಂಪತ್ತಿನ 94% ಭಾಗವನ್ನು ಈ ಪ್ರಶಸ್ತಿಗಳ ಸ್ಥಾಪನೆಗೆ ಉಯಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ 1901ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
✦ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು – ಮೇಡಂ ಕ್ಯೂರಿ
✦ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ -ಮದರ್ ಥೆರೆಸಾ

✦ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು :
1.ರವೀಧ್ರನಾಥ ಟ್ಯಾಗೋರ್ – ಸಾಹಿತ್ಯ 1913
2.ಡಾ. ಸಿ.ವಿ. ರಾಮನ್ – ಭೌತಶಾಸ್ತ್ರ -1930
3.ಡಾ. ಹರಗೋವಿಂದ ಖುರಾನಾ – ವೈದ್ಯಕೀಯ 1968
4.ಮದರ್ ತೆರೆಸಾ – ಶಾಂತಿ 1979
5.ಡಾ. ಎಸ್. ಚಂದ್ರಶೇಖರ್ – ಭೌತಶಾಸ್ತ್ರ -1983
6.ಅಮತ್ರ್ಯ ಸೇನ್ – ಅರ್ಥಶಾಸ್ತ್ರ – 1998
7.ವೆಂಕಟರಮಣ ರಾಮಕೃಷ್ಣನ್ – ರಸಾಯನಶಾಸ್ತ್ರ – 2009
8.ಕೈಲಾಶ ಸತ್ಯಾರ್ಥಿ ಪ್ರಕಾಶ – ಶಾಂತಿ – 2014
9.ಅಭಿಜಿತ್ ಬ್ಯಾನರ್ಜಿ – ಅರ್ಥಶಾಸ್ತ್ರ -2019

ಭಾರತೀಯ ಮೂಲದ ಸಾಗರೋತ್ತರ ನಾಗರಿಕರು :
ಹರ್ ಗೋಬಿಂದ್ ಖೊರಾನ – ಜೀವಶಾಸ್ತ್ರ ಅಥವಾ ಶರೀರಶಾಸ್ತ್ರ- 1968
ಸುಬ್ರಹ್ಮಣ್ಯನ್ ಚಂದ್ರಶೇಖರ್ – ಭೌತಶಾಸ್ತ್ರ – 1983
ವೆಂಕಟರಾಮನ್ ರಾಮಕೃಷ್ಣನ್ – ರಸಾಯನಶಾಸ್ತ್ರ – 2009

ಭಾರತೀಯ ಸಂಪರ್ಕ ಹೊಂದಿರುವ ನೊಬೆಲ್ ಪ್ರಶಸ್ತಿ ವಿಜೇತರು :
ರೊನಾಲ್ಡ್ ರೋಸ್ – ಜೀವಶಾಸ್ತ್ರ-1902
ರುಡ್ಯಾರ್ಡ್ ಕಿಪ್ಲಿಂಗ್ – ಸಾಹಿತ್ಯ – 1907
14ನೇ ದಲೈ ಲಾಮಾ – ಶಾಂತಿ- 1989
ವಿ.ಎಸ್.ನೈಪಾಲ್ – ಸಾಹಿತ್ಯ- 2001

Leave a Reply

Your email address will not be published. Required fields are marked *

error: Content Copyright protected !!