Persons and PersonaltySpardha TimesSports

ಚದುರಂಗ ಚತುರ, ಚೆಸ್ ಗ್ರಾಂಡ್‍ಮಾಸ್ಟರ್ ವಿಶ್ವನಾಥನ್ ಆನಂದ್’ರ ಬದುಕು-ಸಾಧನೆ

Share With Friends

ಚದುರಂಗ ಚತುರ, ಭಾರತದ ಚೆಸ್ ಗ್ರಾಂಡ್‍ಮಾಸ್ಟರ್ ಮತ್ತು ವಿಶ್ವ ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್‍ ಬದುಕು ಮತ್ತು ಸಾಧನೆ ಕುರಿತು ಇಲ್ಲೊಂದು ವರದಿ. ಭಾರತದ ಚೆಸ್ ಗ್ರಾಂಡ್‍ಮಾಸ್ಟರ್ ಮತ್ತು ವಿಶ್ವ ಮಾಜಿ ಟೆನಿಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಡಿಸೆಂಬರ್ 11, 1969ರಲ್ಲಿ ಜನಿಸಿದರು. 1988ರಲ್ಲಿ ಭಾರತದ ಪ್ರಥಮ ಗ್ರಾಂಡ್‍ಮಾಸ್ಟರ್ ಆಗಿ ಹೊರಹೊಮ್ಮಿದರು.  

2000 ರಿಂದ 2002ರವರೆಗೆ ಎಫ್‍ಐಡಿಇ ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿ ಗೆದ್ದರು. 2007ರಲ್ಲಿ ನಿರ್ವಿವಾದ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. 2008ರಲ್ಲಿ ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ವಿರುದ್ಧ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡರು. 2010ರಲ್ಲಿ ವೆಸೆಲಿನ್ ಟೊಪಲೋವ್ ವಿರುದ್ದ ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿ ಪಡೆದರು. 2012ರಲ್ಲಿ ಬೋರಿಸ್ ಗೆಲ್‍ಫಾಂಡ್ ವಿರುದ್ಧ ಜಯ ಸಾಧಿಸಿ ಮತ್ತೆ ವಿಶ್ವ ಚೆಸ್ ಚಾಂಪಿಯನ್ ಆದರು.

2013ರಲ್ಲಿ ಮ್ಯಾಗ್ನಸ್ ಕಾರ್ಲ್‍ಸೆನ್ ವಿರುದ್ಧ ವಿಶ್ವ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ಆನಂದ್ ಪರಾಭವಗೊಂಡರು. 2014ರಲ್ಲಿ ಮತ್ತೆ ವಿಶ್ವ ಚೆಸ್ ಚಾಂಪಿಯನ್‍ನಲ್ಲಿ ಕಾರ್ಲ್‍ಸೆನ್ ವಿರುದ್ಧ ಸೋತರು. ವಿಶ್ವನಾಥನ್ ಆನಂದ್ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. 2006ರಲ್ಲಿ ಎಫ್‍ಐಡಿಇ ಶ್ರೇಯಾಂಕ ಪಟ್ಟಿಯಲ್ಲಿ 2800 ಎಲೋ ಮಾರ್ಕ್ ಗಳಿಸಿ ಇತಿಹಾಸ ಸೃಷ್ಟಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಆನಂದ್ ಪಾತ್ರರಾದರು.

ದಯಾಮರಣ ಎಂದರೇನು.? ಇತಿಹಾಸವೇನು.? ಎಷ್ಟು ವಿಧ..?

ಈ ಸಾಧನೆ ಮಾಡಿದ ಇತರ ಚೆಸ್ ಆಟಗಾರರೆಂದರೆ ಗ್ಯಾರಿ ಕಾಸ್ಪರೋವ್, ವ್ಲಾದಿಮಿರ್ ಕ್ರಾಮ್ನಿಕ್, ಮತ್ತು ವೆಸೆಲಿನ್ ಟೊಪಲೋವ್. 21 ತಿಂಗಳುಗಳ ಕಾಲ ವಿಶ್ವದ ನಂಬರ್ ಒನ್ ಸ್ಥಾನವನ್ನು ಆಕ್ರಮಿಸಿದ್ದ ಅವರು ದೀರ್ಘಾವಧಿ ಈ ಶ್ರೇಣಿಯನ್ನು ಉಳಿಸಿಕೊಂಡ ಆರನೇ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ರಾಜೀವ್‍ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content Copyright protected !!