GKHistoryPersons and PersonaltySpardha Times

ಚಿಕ್ಕದೇವರಾಜ ಒಡೆಯರು (ಕ್ರಿ.ಶ.1673-1704)

Share With Friends

  ಇವರು ಮೈಸೂರಿನ ಸುಪ್ರಸಿದ್ಧ ದೊರೆಗಳಲ್ಲಿ ಒಬ್ಬರಾಗಿದ್ದರು.
 ಚಿಕ್ಕದೇವರಾಜ ಒಡೆಯರು ಉತ್ತಮ ಆಡಳಿತಗಾರರಾಗಿದ್ದರು.
  ಅವರು ಆಡಳಿತವನ್ನು ವ್ಯವಸ್ಥೆಗೊಳಿಸಿ, ಅಠಾರ ಕಛೇರಿಯನ್ನು ಸ್ಥಾಪಿಸಿದರು. ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.
  ಪತ್ರ ವ್ಯವಹಾರಕ್ಕೆ ಸುವ್ಯವಸ್ಥೆ ಏರ್ಪಡಿಸಿ “ಅಂಚೆ” ಇಲಾಖೆಯನ್ನು ಆರಂಭಿಸಿದರು.
  ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿದರು.

  ಇವರು ಆಡಳಿತದಲ್ಲಿ ಮಿತವ್ಯಯ ಸಾಧಿಸಿ ಖಜಾನೆಯಲ್ಲಿ ಧನಕನಕಗಳನ್ನು ಸಂಗ್ರಹಿಸಿದ್ದರು.
   ಚಿಕ್ಕದೇವರಾಜನಾಲೆ ಮತ್ತು ದೊಡ್ಡದೇವರಾಜನಾಲೆ ಎಂಬ ಎರಡು ಕಾಲುವೆಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಿದರು.
   ಚಿಕ್ಕದೇವರಾಜರು ಮೊಘಲ ದೊರೆ ಔರಂಗಜೇಬನಿಂದ “ಬೆಂಗಳೂರನ್ನು” ಗುತ್ತಿಗೆ ಪಡೆದರು.
  ಕಲೆ ಮತ್ತು ಸಾಹಿತ್ಯಕ್ಕೆ ಇವರು ಹಲವು ಕೊಡುಗೆಗಳನ್ನು ನೀಡಿದರು.

  ಬೆಂಗಳೂರಿನ ಕೋಟೆ ವೆಂಕಟರಮಣ ಮಂದಿರ, ಮೈಸೂರಿನ ಶ್ವೇತ ವರಾಹ ಮಂದಿರ ಮತ್ತು           ಗುಂಡ್ಲುಪೇಟೆಯ ಪರವಾಸುದೇವ ಮಂದಿರಗಳು ಇವರ ಕಾಲದಲ್ಲಿ ನಿರ್ಮಾಣವಾದವು.
  ಸ್ವತ: ಇವರು ಕವಿಯಾಗಿದ್ದುಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯನ್ನು      ಕುರಿತುಚಿಕ್ಕದೇವರಾಜ ಬಿನ್ನಪಂ” ಎಂಬ ಕಾವ್ಯವನ್ನು ಬರೆದಿದ್ದಾರೆ.
  ಸಿಂಗಾರಾರ್ಯ, ಚಿಕ್ಕುಪಾಧ್ಯಾಯ,ಮತ್ತುಸಂಚಿಯ ಹೊನ್ನಮ್ಮ (ಕೃತಿ-ಹದಿಬದೆಯ ಧರ್ಮ) ಇವರ      ಆಸ್ಥಾನ ಕವಿಗಳಾಗಿದ್ದರು.

 ಚಿಕ್ಕದೇವರಾಜ ಒಡೆಯರಿಗಿದ್ದ ಎರಡು ಪ್ರಮುಖ ಬಿರುದುಗಳು – “ಕರ್ನಾಟಕ ಚಕ್ರವರ್ತಿ” “  “ನವಕೋಟಿ ನಾರಾಯಣ”.
  ಇವರನ್ನು “ ನವಕೋಟಿ ನಾರಾಯಣ” ಎಂದು ಕರೆಯಲು ಕಾರಣ – ಇವರು ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿ ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ತಮ್ಮ ಖಜಾನೆಯಲ್ಲಿ ಅಪಾರ ಧನಕನಕಗಳನ್ನು ಸಂಗ್ರಹಿಸಿದ್ದರು.
  ಚಿಕ್ಕದೇವರಾಜನು ಆಧುನಿಕ ವಿಚಾರಧಾರೆ ಹೊಂದಿದ್ದನು. ಇದಕ್ಕೆ ಸಾಕ್ಷಿಯಾಗಿ ಅವರು ತಾನು ತೀರಿಕೊಂಡಾಗ ತನ್ನ ರಾಣಿಯರು ಸಹಗಮನ ಮಾಡಬಾರದೆಂದು ಆಜ್ಞಾಪಿಸಿದ್ದರು.

ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು

Leave a Reply

Your email address will not be published. Required fields are marked *

error: Content Copyright protected !!