Current AffairsSpardha Times

ಉತ್ತರಾಖಂಡ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಯಾರು..?

Share With Friends

ಉತ್ತರ ಲ್ ರಿತು ಬಹ್ರಿ (Ritu Bahri)
ನ್ಯಾಯಮೂರ್ತಿ ರಿತು ಬಹ್ರಿ ಅವರನ್ನು ಉತ್ತರಾಖಂಡ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ( first woman Chief Justice of Uttarakhand High Court.)ಯಾಗಿ ನೇಮಕ ಮಾಡಲಾಗಿದೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಅವರು ನ್ಯಾಯಮೂರ್ತಿ ರಿತು ಬಹ್ರಿಗೆ ಪ್ರಮಾಣ ವಚನ ಬೋಧಿಸಿದರು. ಅವರು ಮಾಜಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಅವರನ್ನು ಬದಲಾಯಿಸಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನ್ಯಾಯಮೂರ್ತಿ ವಿಪಿನ್ ಸಂಘಿ ಅವರು ನಿವೃತ್ತರಾದ ನಂತರ ಹುದ್ದೆ ಖಾಲಿಯಾಗಿತ್ತು ಮತ್ತು ನ್ಯಾಯಮೂರ್ತಿ ಮನೋಜ್ ತಿವಾರಿ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಮೂಲಕ ನ್ಯಾಯಮೂರ್ತಿ ಬಹ್ರಿ ಅವರು ರಾಜ್ಯದಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ.

‘ಮಹಾಭಿಯೋಗ’ ಎಂದರೇನು..?

Leave a Reply

Your email address will not be published. Required fields are marked *

error: Content Copyright protected !!