Current AffairsCurrent Affairs QuizSpardha TimesWeekly Current Affairs

ಈ ವಾರದ ಪ್ರಚಲಿತ ಘಟನೆಗಳ ಹೈಲೈಟ್ಸ್ (ಆ.2 ರಿಂದ ಆ.8ರ ವರೆಗೆ )

Share With Friends

1. ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ “ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (Periodic Labour Force Survey -PLFS) ವರದಿಯ ಪ್ರಕಾರ 2019-20 ರಲ್ಲಿ ಭಾರತೀಯ ಮಹಿಳೆಯರಲ್ಲಿ ನಿರುದ್ಯೋಗ ದರ ಎಷ್ಟು..?
➤ 4.2%

2. ಆಗಸ್ಟ್ ತಿಂಗಳಲ್ಲಿ UNSC (ವಿಶ್ವಸಂಸ್ಥೆಯ ಭದ್ರತಾ ಮಂಡಳಿ) ಅಧ್ಯಕ್ಷತೆಯನ್ನು ಯಾವ ದೇಶ ವಹಿಸಿಕೊಂಡಿದೆ..?
➤ ಭಾರತ

3. ಜುಲೈ 2021ರಲ್ಲಿ, ಗೈಡೊ ಬೆಲ್ಲಿಡೊ ಅವರು ಯಾವ ದೇಶದ ಪ್ರಧಾನಿಯಾಗಿ ಆಯ್ಕೆಯಾದರು..?
➤ ಪೆರು

4. ಆರ್ಬಿಐನ ಹೊಸ ನಿಯಮಗಳ ಪ್ರಕಾರ, ಹಣಕಾಸಿನ ವಹಿವಾಟುಗಳಿಗೆ ಹೊಸ ವಿನಿಮಯ ಶುಲ್ಕ ಎಷ್ಟು..?
➤ 17 ರೂ

5. 2021ನೇ ಸಾಲಿನ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಯಾರು..?
➤ ಸೈರಸ್ ಪೂನವಾಲಾ

6. ಎಲ್ಲಾ ಸರ್ಕಾರಿ ಸೇವೆಗಳ ಪ್ರತಿ ವರ್ಗದಲ್ಲಿ ಟ್ರಾನ್ಸ್ಜೆಂಡರ್ (ತೃತೀಯ ಲಿಂಗಿಗಳು) ಸಮುದಾಯಕ್ಕೆ ಶೇ. 1 ರಷ್ಟು ಮೀಸಲಾತಿಯನ್ನು ಒದಗಿಸಿದ ಮೊದಲ ಭಾರತೀಯ ರಾಜ್ಯ ಯಾವುದು..?
➤ ಕರ್ನಾಟಕ

7. ಆಗಸ್ಟ್, 2021ರಲ್ಲಿ ಹೊಸ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ಆಗಿ ಯಾರು ನೇಮಕಗೊಂಡಿದ್ದಾರೆ..?
➤ ದೀಪಕ್ ದಾಸ್

8. ಕೋವಿಡ್ -19 ಚಿಕಿತ್ಸೆಗಾಗಿ ಯಾವ ಸಂಸ್ಥೆಯು ಆಯುಷ್ ಸಚಿವಾಲಯದೊಂದಿಗೆ ‘ಅಶ್ವಗಂಧ’ ಕುರಿತು ಅಧ್ಯಯನ ನಡೆಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ..?
➤ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್

9. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಆರಂಭಿಸಿದ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಹೆಸರೇನು..?
e-RUPI

10. ಶೇ.100 ರಷ್ಟು ಕೋವಿಡ್ -19 ಲಸಿಕೆ ನೀಡುವ ಗುರಿ ಸಾಧಿಸಿದ ಭಾರತದ ಮೊದಲ ನಗರ ಯಾವುದು..?
➤ ಭುವನೇಶ್ವರ

11. ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು..?
➤ ಪಿ ವಿ ಸಿಂದು

12. ಭಾರತದಲ್ಲಿ ಯಾವ ದಿನದಂದು “ಮುಸ್ಲಿಂ ಮಹಿಳಾ ಹಕ್ಕುಗಳ ದಿನ”ವನ್ನು ಮೊದಲ ಬಾರಿಗೆ ಆಚರಿಸಲಾಯಿತು..?
➤- ಆಗಸ್ಟ್ 1

13. ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಲವ್ಲಿನಾ ಬೊರ್ಗೊಹೈನ್ ಯಾವ ಪದಕವನ್ನು ಗೆದ್ದಿದ್ದಾರೆ..?
➤ ಕಂಚು

14. 2016 AJ193 ಎಂಬ ಹೆಸರಿನ ಬೃಹತ್ ಕ್ಷುದ್ರಗ್ರಹ ಯಾವ ದಿನದಂದು ಭೂಮಿಯ ಹತ್ತಿರದಲ್ಲಿ ಹಾದುಹೋಗಲಿದೆ..?
➤ ಆಗಸ್ಟ್ 21, 2021

15. ಅರ್ಮೇನಿಯಾ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾದವರು ಯಾರು.. ?
➤ ನಿಕೋಲ್ ಪಾಶಿನ್ಯಾನ್

16. ಫಾರ್ಮುಲಾ ಒನ್ ಹಂಗೇರಿಯನ್ ಗ್ರ್ಯಾಂಡ್ ಪ್ರಿಕ್ಸ್ 2021ಅನ್ನು ಯಾರು ಗೆದ್ದರು..?
➤ ಎಸ್ಟೆಬಾನ್ ಓಕಾನ್

17. ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಆರಂಭಿಸಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯ ಹೆಸರೇನು..?
➤ ಐಎನ್ಎಸ್ ವಿಕ್ರಾಂತ್

18. ಟೋಕಿಯೊ ಪ್ಯಾರಾಲಿಂಪಿಕ್ಸ್ 2020ಗಾಗಿ ಭಾರತದ ಥೀಮ್ ಸಾಂಗ್ ಅನ್ನು ರಚಿಸಿದವರು ಯಾರು..?
➤ ಸಂಜೀವ್ ಸಿಂಗ್

19. ಉತ್ತರ ಭಾರತದಲ್ಲಿ ಮೊದಲ ಆರ್ಕಿಡ್ ಸಂರಕ್ಷಣಾ ಕೇಂದ್ರವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಯಿತು..?
➤ ಉತ್ತರಾಖಂಡ

20. ಡಿಫ್ಎಕ್ಸ್ಪೋ -2022 (DefExpo-2022)ಅನ್ನು ಆಯೋಜಿಸಲು ರಕ್ಷಣಾ ಸಚಿವಾಲಯವು ಯಾವ ನಗರವನ್ನು ಆಯ್ಕೆ ಮಾಡಿದೆ..?
➤ ಗಾಂಧಿನಗರ, ಗುಜರಾತ್

21. ರಕ್ಷಣೆ ಮತ್ತು ಸುರಕ್ಷಿತ ಆಶ್ರಯವನ್ನು ಒದಗಿಸುವ ಸಂಸ್ಥೆ “ಗರಿಮಾ ಗೃಹಸ್”(Garima Grihas) ವನ್ನು ಯಾವ ಸಚಿವಾಲಯವು ಪ್ರಾರಂಭಿಸಿತು..?
➤ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

22. ಟೋಕಿಯೊ 2020 ಒಲಿಂಪಿಕ್ಸ್ನಲ್ಲಿ ಹಾಕಿಯಲ್ಲಿ ಯಾವ ರಾಷ್ಟ್ರವನ್ನು ಸೋಲಿಸಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿತು..?
➤ಜರ್ಮನಿ

23. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಏನೆಂದು ಮರುನಾಮಕರಣ ಮಾಡಲಾಗಿದೆ..?
➤ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

24. ಸಮುದ್ರ ಉದ್ಯಾನಗಳಲ್ಲಿ ಸನ್ಸ್ಕ್ರೀನ್ ಲೋಷನ್ಗಳ ಬಳಕೆಯನ್ನು ನಿಷೇಧಿಸಿದ ರಾಷ್ಟ್ರ ಯಾವುದು ..?
➤ ಥೈಲ್ಯಾಂಡ್

25. ಭಾರತೀಯ ಜೀವ ವಿಮಾ ನಿಗಮದ (LIC) ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ (ಆಗಸ್ಟ್ 21 ರಲ್ಲಿ) ಯಾರು ನೇಮಕಗೊಂಡರು.. ?
➤ಮಿನಿ ಐಪೆ

26. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನಿಂದ ಇತ್ತೀಚೆಗೆ (ಆಗಸ್ಟ್ 21 ರಲ್ಲಿ) ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಮೋಟರಬಲ್ ಪಾಸ್ (ಡಾಂಬರ್ ರಸ್ತೆ) ಯಾವುದು..?
➤ ಉಮ್ಲಿಂಗ್ ಲಾ ಪಾಸ್

27. ಆನ್ಲೈನ್ ಆಟಗಳನ್ನು ನಿಷೇಧಿಸುವ ಯಾವ ರಾಜ್ಯದ ಕಾನೂನನ್ನು ಆ ರಾಜ್ಯದ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ..?
➤ ತಮಿಳುನಾಡು – ಮದ್ರಾಸ್ ಹೈಕೋರ್ಟ್

28. ಭಾರತದ ಮೊದಲ ಭೂಕಂಪದ ಮುನ್ನೆಚ್ಚರಿಕೆ (Earthquake Early Warning -EEW) ಮೊಬೈಲ್ ಅಪ್ಲಿಕೇಶನ್ ‘ಉತ್ತರಾಖಂಡ್ ಭೂಕಂಪ್ ಅಲರ್ಟ್’ ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ..?
➤ IIT ರೂರ್ಕಿ

29. ಆಗಸ್ಟ್ 6, 2021ರ ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್ ಪಟ್ಟಿಯ ಪ್ರಕಾರ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡವರು ಯಾರು..?
➤ ಬರ್ನಾರ್ಡ್ ಅರ್ನಾಲ್ಟ್ ಮತ್ತು ಫ್ಯಾಮಿಲಿ

30. ಜುಲೈ 2021 ರಲ್ಲಿ, ಭಾರತ ಮತ್ತು ರಷ್ಯಾ 12ನೇ ಆವೃತ್ತಿಯ ನೌಕಾ ವ್ಯಾಯಾಮ ‘INDRA’ ಅನ್ನು ಬಾಲ್ಟಿಕ್ ಸಮುದ್ರದಲ್ಲಿ ನಡೆಸಿತು, ಅಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ……………………
➤ಐಎನ್ಎಸ್ ತಬರ್

# ಇವುಗಳನ್ನೂ ಓದಿ : ತಿಂಗಳವಾರು ಪ್ರಚಲಿತ ಘಟನೆಗಳ ಕ್ವಿಜ್
ಪ್ರಚಲಿತ ಘಟನೆಗಳು : ಜುಲೈ-2021
ಪ್ರಚಲಿತ ಘಟನೆಗಳು : ಜೂನ್-2021
ಪ್ರಚಲಿತ ಘಟನೆಗಳು : ಮೇ-2021
ಪ್ರಚಲಿತ ಘಟನೆಗಳು : ಏಪ್ರಿಲ್-2021
ಪ್ರಚಲಿತ ಘಟನೆಗಳು : ಮಾರ್ಚ್-2021
ಪ್ರಚಲಿತ ಘಟನೆಗಳು : ಫೆಬ್ರವರಿ-2021
➤ ಪ್ರಚಲಿತ ಘಟನೆಗಳು : ಜನವರಿ-2021
➤  ಪ್ರಚಲಿತ ಘಟನೆಗಳು : ಡಿಸೆಂಬರ್ -2020
ಪ್ರಚಲಿತ ಘಟನೆಗಳು : ನವೆಂಬರ್ -2020

# ಇವುಗಳನ್ನೂ ಓದಿ
▶ ಪ್ರಚಲಿತ ಘಟನೆಗಳ ಕ್ವಿಜ್ (01/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (02/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (03/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (04/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (05/08/2021)
▶ ಪ್ರಚಲಿತ ಘಟನೆಗಳ ಕ್ವಿಜ್ (06/08/2021)

error: Content Copyright protected !!