Job AlertSpardha Times

ರೈಲ್ವೆ ರಕ್ಷಣಾ ಪಡೆಯಲ್ಲಿ ಕಾನ್ಸ್‌ಟೇಬಲ್, ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳ ನೇಮಕಾತಿ

Share With Friends

ರೈಲ್ವೆ ಪ್ರೊಟೆಕ್ಷನ್ ಫೋರ್ಸ್​​​ನಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಪ್ರಕಟಣೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 31-01-2024 ಕೊನೇ ದಿನವಾಗಿರುತ್ತದೆ.

ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು – 2,250
ಕಾನ್ಸ್‌ಟೇಬಲ್ – 2000
ಸಬ್ ಇನ್‌ಸ್ಟೆಕ್ಟರ್ – 250

ವಿದ್ಯಾರ್ಹತೆ :
ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಸಬ್ ಇನ್‌ಸ್ಟೆಕ್ಟರ್ ಹುದ್ದೆ ಆಕಾಂಕ್ಷಿಗಳು ಪದವಿ ಪಡೆದಿರಬೇಕು.

ವಯೋಮಿತಿ :
ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವವರು 20 ರಿಂದ 25 ವರ್ಷದೊಳಗಿರಬೇಕು. ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳಿಗೆ 5ವರ್ಷ, ಒಬಿಸಿಗಳಿಗೆ 3ವರ್ಷ, ಸೈನಿಕ, ಮಹಿಳಾ, ವಿಧವೆ, ಅಂಗವಿಕಲ ಸೇರಿ ಇತರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಸಲ್ಲಿಸುವ ವಿಧಾನ :
ಆರ್​​ಪಿಎಫ್​​​​ನ ಅಧಿಕೃತ ವೆಬ್‌ಸೈಟ್‌ https://rpf.indianrailways.gov.in/RPF/ ಭೇಟಿ ನೀಡಿ,ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ
ಆರ್‌ಆರ್‌ಬಿ ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಆರ್‌ಪಿಎ್ ನಡೆಸುವ ದೈಹಿಕ ದಕ್ಷತೆ ಪರೀಕ್ಷೆ ಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.

✦ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ https://indianrailways.gov.in/ ವೆಬ್ಸೈಟ್ ಗೆ ಭೇಟಿನೀಡಿ.

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗಳ ನೇಮಕಾತಿ
10th, ITI ಪಾಸಾದವರಿಗೆ ವಾಯುವ್ಯ ರೈಲ್ವೆಯಲ್ಲಿ ಉದ್ಯೋಗಾವಕಾಶ
ಯಾದಗಿರಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಜವಾನ ಹುದ್ದೆಗಳ ನೇಮಕಾತಿ

Leave a Reply

Your email address will not be published. Required fields are marked *

error: Content Copyright protected !!