GKSpardha Times

ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು

Share With Friends

✦ ರಾಜ್ಯಪಕ್ಷಿ – ‘ ದಾಸ ಮಗರೆ’(ಇಂಡಿಯನ್ ರೋಲರ್)
✦ ರಾಜ್ಯ ಪ್ರಾಣಿ – ಆನೆ.
✦ ರಾಜ್ಯ ವೃಕ್ಷ – ಶ್ರೀಗಂಧ.
✦ ರಾಜ್ಯಪುಷ್ಪ – ಕಮಲ
✦ ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
✦ ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
✦ ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ

✦ ‘ಕರ್ನಾಟಕ’ ಎಂಬ ಪದವನ್ನು ನೀಡಿದವರು – ಆಲೂರು ವೆಂಕಟರಾಯರು
✦ 1973 ನವೆಂಬರ್ 1 ರಂದು ‘ ಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದವರು ‘ದೇವರಾಜ ಅರಸ್’.
✦ ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
✦ ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
✦ ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
✦ ವಿಧಾನಸಭೆಯ ಸದಸ್ಯರ ಸಂಖ್ಯೆ – 225.
✦ ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75

✦ ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
✦ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
✦ ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
✦ ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
✦ ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
✦ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್,ನಿಜಲಿಂಗಪ್ಪ
✦ ವಿಧಾನಸಭೆಯ ಮೊದಲ ಸಭಾಪತಿ – ವಿ,ವೆಂಕಟಪ್ಪ
✦ ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ

✦ ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ – ಆರ್ , ವೆಂಕಟರಾಮಯ್ಯ.
✦ ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು – ಕರ್ನಾಟಕದ ಹಾಸನದಲ್ಲಿ
✦ ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.
✦ ಕರ್ನಾಟಕದ ಮೊದಲ ಹೆಸರು ‘ಮೈಸೂರು ರಾಜ್ಯ’,.
✦ ಕರ್ನಾಟಕದ ಜಿಲ್ಲೆಗಳ ಸಂಖ್ಯೆ – 30
✦ ಕರ್ನಾಟಕದ ತಾಲ್ಲೂಕುಗಳ ಸಂಖ್ಯೆ – 177
✦ 2011 ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆಯು 6,11,30, 704

✦ ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನವನ್ನು ಹೊಂದಿದೆ.
✦ ‘ಸದರ್ನ್ ಬಡ್ ವಿರ್ಂಗ್’ ಅನ್ನು ಕರ್ನಾಟಕದ ‘ ರಾಜ್ಯ ಚಿಟ್ಟೆ’ ಎಂದು ಸರ್ಕಾರ ಘೋಷಿಸಿದೆ. ಇದರೊಂದಿಗೆ ರಾಜ್ಯಚಿಟ್ಟೆಯನ್ನು ಘೋಷಿಸಿದ ದೇಶದ 2 ನೇ ರಾಜ್ಯ ಕರ್ನಾಟಕವಾಗಿದೆ.
✦ ವಿಸ್ತೀರ್ಣದಲ್ಲಿ ಏಳನೇ ದೊಡ್ಡ ರಾಜ್ಯವಾಗಿದೆ.
✦ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
✦ ವಿಸ್ತೀರ್ಣದಲ್ಲಿ ಚಿಕ್ಕ ಜಿಲ್ಲೆ – ಬೆಂಗಳೂರು ನಗರ
✦ ನಾಲ್ಕು ಕಂದಾಯ ವಿಭಾಗಗಳು- ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ

Leave a Reply

Your email address will not be published. Required fields are marked *

error: Content Copyright protected !!