Current AffairsSpardha Times

ಒಡಿಶಾದ ಗುಪ್ತೇಶ್ವರ ಅರಣ್ಯವನ್ನು “ಜೀವವೈವಿಧ್ಯ ಪರಂಪರೆಯ ತಾಣ”ವೆಂದು ಘೋಷಣೆ

Share With Friends

ಒಡಿಶಾ ಕೊರಾಪುಟ್ ಜಿಲ್ಲೆಯ ಗುಪ್ತೇಶ್ವರ ಅರಣ್ಯವನ್ನು ತನ್ನ ನಾಲ್ಕನೇ ಜೀವವೈವಿಧ್ಯ ಪರಂಪರೆಯ ತಾಣವಾಗಿ (BHS) ಘೋಷಿಸುವ ಮೂಲಕ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಈ ಘೋಷಣೆಯು ರಾಜ್ಯದ ಪರಿಸರ ಸಂರಕ್ಷಣಾ ಪ್ರಯತ್ನಗಳಲ್ಲಿ ಒಂದು ಪ್ರಮುಖ ಕ್ಷಣವನ್ನು ಗುರುತಿಸುತ್ತದೆ, ಮಂದಸಾರು, ಮಹೇಂದ್ರಗಿರಿ ಮತ್ತು ಗಂಧಮಾರ್ದನ ಶ್ರೇಣಿಯನ್ನು ಸೇರುತ್ತದೆ, ಇದು ಹಿಂದೆ ತಮ್ಮ ವಿಶಿಷ್ಟ ಜೀವವೈವಿಧ್ಯಕ್ಕಾಗಿ ಗುರುತಿಸಲ್ಪಟ್ಟಿದೆ.

ಗುಪ್ತೇಶ್ವರ ಅರಣ್ಯವು 350 ಹೆಕ್ಟೇರ್‌ಗೂ ಹೆಚ್ಚು ವ್ಯಾಪಿಸಿದೆ. ಈ ಪ್ರದೇಶವು ವಿಶಾಲವಾದ ಸಸ್ಯ ಮತ್ತು ಪ್ರಾಣಿಗಳ ಆಶ್ರಯ ತಾಣವಾಗಿರದೆ ಪವಿತ್ರ ಪ್ರಾಮುಖ್ಯತೆಯನ್ನು ಹೊಂದಿದೆ, ಅದರ ತೋಪುಗಳನ್ನು ಸಾಂಪ್ರದಾಯಿಕವಾಗಿ ಸ್ಥಳೀಯ ಸಮುದಾಯದಿಂದ ಪೂಜಿಸಲಾಗುತ್ತದೆ.

ಒಡಿಶಾ (Odisha) ಜೀವ ವೈವಿಧ್ಯಮಯ ಮಂಡಳಿ ನಡೆಸಿದ ಜೀವವೈವಿಧ್ಯದ ದಾಸ್ತಾನು ಮತ್ತು ಸಮೀಕ್ಷೆಯ ಪ್ರಕಾರ, ಈ ಅರಣ್ಯವು 28 ಜಾತಿಯ ಸಸ್ತನಿಗಳು, 18 ಜಾತಿಯ ಉಭಯಚರಗಳು, 188 ಜಾತಿಯ ಪಕ್ಷಿಗಳು, 48 ಜಾತಿಯ ಸರೀಸೃಪಗಳು, 141 ಜಾತಿಯ ಚಿಟ್ಟೆಗಳು ಸೇರಿದಂತೆ ವಿವಿಧ ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ.

45 ಜಾತಿಯ ಮೀನುಗಳು, 43 ಜಾತಿಯ ಪತಂಗಗಳು, 41 ಜಾತಿಯ ಓಡೋನೇಟ್‌ಗಳು, 30 ಜಾತಿಯ ಜೇಡಗಳು, 20 ಜಾತಿಯ ಕೆಳ ಅಕಶೇರುಕಗಳು ಮತ್ತು ಆರು ಜಾತಿಯ ಚೇಳುಗಳಿಗೂ ಸಹ ನೆಲೆ ನೀಡಿದೆ ಈ ಅರಣ್ಯ

ಒಡಿಶಾದ ಕೊರಾಪುಟ್ ಜಿಲ್ಲೆಯ ಗುಪ್ತೇಶ್ವರ ಶಿವ ದೇವಾಲಯದ ಬಳಿ ಇರುವ ಪ್ರಾಚೀನ ಗುಪ್ತೇಶ್ವರ ಅರಣ್ಯ (Gupteswar Forest)ವನ್ನು “ರಾಜ್ಯದ ನಾಲ್ಕನೇ ಜೀವವೈವಿಧ್ಯ-ಪಾರಂಪರಿಕ ತಾಣ” (Biodiversity Heritage Site) ಎಂದು ಘೋಷಿಸಲಾಗಿದೆ ಎಂದು ಒಡಿಶಾದ ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *

error: Content Copyright protected !!