GeographyGKSpardha Times

ಪ್ರಪಂಚದ ಪ್ರಮುಖ ಮರುಭೂಮಿಗಳು ಮತ್ತು ಅಲ್ಲಿನ ಸಸ್ಯವರ್ಗ

Share With Friends

ಭೂಮಿಯ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು ಮರುಭೂಮಿ ಎಂದು ಕರೆಯುತ್ತಾರೆ. ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ.

# ಎಷ್ಟು ಮರುಭೂಮಿಗಳಿಗೆ..?
1.ಅಂಟಾರ್ಟಿಕ ಮರುಭೂಮಿ
2.ಸಹಾರ ಮರುಭೂಮಿ
3.ಆರ್ಟಿಕ್ ಮರುಭೂಮಿ
4.ಅರೇಬಿಯನ್ ಮರುಭೂಮಿ
5.ಕಲಹರಿ ಮರುಭೂಮಿ
6.ಪೆಟಗೋನಿಯನ್ ಮರುಭೂಮಿ
7.ಗ್ರೇಟ್ ವಿಕ್ಟೋರಿಯಾ ಮರುಭೂಮಿ
8.ಗ್ರೇಟ್ ಬಸಿನ್ ಮರುಭೂಮಿ
9.ಸೈರಿಯನ್ ಮರುಭೂಮಿ

# ಅಂಟಾರ್ಟಿಕ ಮರುಭೂಮಿ
ಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ. ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ.

# ಸಹಾರ ಮರುಭೂಮಿ
ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು “ಗ್ರೇಟ್ ಡೆಸರ್ಟ್” ಎಂದು ಕರೆಯುವರು, ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ. ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ “ಉಷ್ಣ ಮರುಭೂಮಿ” ಆಗಿದೆ. ಇಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಒಂಟೆ, ಚಿರತೆ, ನರಿ, ಹಲ್ಲಿ, ಆಫ್ರಿಕನ್ ಕಾಡು ನಾಯಿ, ಉಷ್ಟ್ರಪಕ್ಷಿ, ಮರುಭೂಮಿ ಮೊಸಳೆ.

# ಆರ್ಟಿಕ್ ಮರುಭೂಮಿ
ಆರ್ಟಿಕ್ ಮರುಭೂಮಿ ಭೂಮಿಯ ಉತ್ತರ ದ್ರುವದಲ್ಲಿ ಕಂಡು ಬರುತ್ತದೆ. ಈ ಮರುಭೂಮಿ ಜಗತ್ತಿನ 3ನೇ ದೊಡ್ಡ ಮರುಭೂಮಿಯಾಗಿದ್ದು ಹಾಗೂ 2ನೇ ಅತಿ ದೊಡ್ಡ ಶೀತ ಮರುಭೂಮಿಯಾಗಿದೆ. ಇದರ ವಿಸ್ತೀರ್ಣವು 2,600,000 ಚ.ಕಿ.ಮೀಗಳಾಗಿವೆ. ಈ ಮರುಭೂಮಿ ಹಿಮದಿಂದ ಕೂಡಿದೆ. ಈ ಮರುಭೂಮಿಯು ಅರ್ಟಿಕ್ ಸಾಗರ, ಕೆನಡಾ, ರಷ್ಯಾ, ಗ್ರೀನಲ್ಯಾಂಡ್, ಯುನೈಟೆಡ್ ಸ್ಪೇಟ್ಸ್, ನಾರ್ವೆ, ಸ್ಪೀಡನ್, ಪಿನಲ್ಯಾಂಡನ್ ಸ್ಪಲ್ಪ ಭಾಗವನ್ನು ಒಳಗೊಂಡಿದೆ. ಇಲ್ಲಿನ ಪ್ರಮುಖ ಪ್ರಾಣಿಗಳೆಂದರೆ ಆರ್ಟಿಕ್ ಮೊಲಸಾರಂಗ, ಅರ್ಟಿಕ್ ನರಿ ಮತ್ತು ತೋಳ, ಧ್ರುವ ಕರಡಿ, ಸೀಲ್, ಮುಂತಾದವುಗಳು. ಈ ಮರುಭೂಮಿಯು ಇತ್ತೀಚಿಗೆ ಜಾಗತಿಕ ತಾಪಮಾನ ಫಲವಾಗಿ ಇಲ್ಲಿನ ನೀರ್ಲಗಲ್ಲುಗಳು ಕರಗುತ್ತಿದೆ.

# ಅರೇಬಿಯನ್ ಮರುಭೂಮಿ :
ಈ ಮರುಭೂಮಿಯು ಮಧ್ಯ ಪೂರ್ವ ಪ್ರಾಂತ್ಯದಲ್ಲಿದ್ದು, ಇದು ಯಮನ್ ದೇಶದಿಂದ ಪರ್ಷಿಯನ್ ಗಲ್ಪ್ ವರೆಗೂ ಮತ್ತು ಒಮಾನ್ ನಿಂದ ಜೋರ್ಡಾನ ಮತ್ತು ಇರಾಕ್ ವರೆಗೂ ವಿಸ್ತರಿಸಿದೆ. ಇದು ಅರೆಬಿಯನ್ ಉಪಖಂಡದಲ್ಲಿ ವ್ಯಾಪಿಸಿದೆ. ಇದು ಜೋರ್ಡಾನ್, ಕುವೈತ್, ಇರಾಕ್, ಕತಾರ್, ಉಮ್ಮಾನ್, ಸೌದಿ ಅರೇಬಿಯಾ, ಯುನೈಟೆಡ್ ಎಮರೈಟಿಸ್, ಎಮನ್ ದೇಶದಲ್ಲಿ ವ್ಯಾಪಿಸಿದೆ. ಇದರ ವಿಸ್ತೀರ್ಣವು 2,330,000 ಚ.ಕಿ.ಮೀ, ಇಲ್ಲಿ ತೈಲ ಸ್ವಾಭಾವಿಕ ಅನಿಲ, ಪಾಸ್ಪೇಟ್, ಮತ್ತು ಗಂಧಕದ ಸಂಪನ್ಮೂಲವಿದೆ. ಈ ಮರುಭೂಮಿ ಬಹುತೇಕ ಸೌದಿ ಅರೇಬಿಯಾದಲ್ಲಿ ವಿಸ್ತರಿಸಿಕೊಂಡಿದೆ.

# ಕಲಹರಿ ಮರುಭೂಮಿ :
ಈ ಮರುಭೂಮಿಯು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದೆ. ಈ ಮರುಭೂಮಿಯಲ್ಲಿ ಬಾಡ್ಸಾನಾ, ನಮೀಬಿಯಾ, ದಕ್ಷಿಣ ಆಪ್ರ್ಹಿಕಾ ದೇಶಗಳಲ್ಲಿ ವ್ಯಾಪಿಸಿದೆ. ಈ ಮರುಭೂಮಿಯಲ್ಲಿ ಚೋಬೆ ನ್ಯಾಷನಲ್ ಪಾರ್ಕ, ಸೆಂಟ್ರಲ್ ಕಲಹರಿ ಗೇಮ್ ರಿಸರ್ವ, ಕಲಹರಿ ಬೇಸಿನ್ಸ್, ಕಲಹರಿ ಜೇಮ್ಸ್ ಬಾಕ್ ನ್ಯಾಷನಲ್ ಪಾರ್ಕ, ಮಾಕಗಾಡಿ ಪಾನ್ಸ್ ಸ್ಥಳಗಳು ಕಂಡು ಬರುತ್ತವೆ. ಕಲಹರಿ ಮರುಭೂಮಿಯ ವಿಸ್ತೀರ್ಣ 900,000 ಚ.ಕಿ.ಮೀ ಈ ಮರುಭೂಮಿ ಪಕ್ಕದಲ್ಲಿ ಅರೆಂಜ್ ನದಿಯು ಹರಿಯುತ್ತದೆ. ಬ್ರಾಂಡ್ ಬರ್ಗ ಪರ್ವತವು ಅತಿ ದೊಡ್ಡ ಪರ್ವತವಾಗಿದೆ 8560 ಅಡಿ.

# ಪೆಟಗೋನಿಯನ್ ಮರುಭೂಮಿ :
ಈ ಮರುಭೂಮಿಯು ವಿಸ್ತೀರ್ಣದಲ್ಲಿ ಜಗತ್ತಿನ 7ನೇ ದೊಡ್ಡ ಮರುಭೂಮಿ. ಈ ಮರುಭೂಮಿಯ ವಿಸ್ತೀರ್ಣ 670,000 ಚ.ಕಿ.ಮೀಗಳು. ಈ ಮರುಭೂಮಿಯು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದ್ದು, ಪ್ರಮುಖವಾಗಿ ಅರ್ಜೆಂಟೈನಾ ಮತ್ತು ಚಿಲಿ ದೇಶಗಳಲ್ಲಿ ವ್ಯಾಪಿಸಿದೆ. ಇಲ್ಲಿ ಹುಲ್ಲುಗಳಿಗೆ ಬದಲಾಗಿ ಪೊದೆಗಳು ಕಂಡು ಬರುತ್ತದೆ. ಈ ಮರುಭೂಮಿಯಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಗೂಬೆ, ಮರುಭೂಮಿ ಹಲ್ಲಿ, ಪಿಗ್ಮಿ ಆರಿಡಿಲೋ ಮುಂತಾದಗಳು.

# ಗ್ರೇಟ್ ವಿಕ್ಟೋರಿಯಾ ಮರುಭೂಮಿ :
ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಮರುಭೂಮಿಯಾಗಿದೆ, ಇದು ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ ಸಣ್ಣ ಸಣ್ಣ ಮರಳಿನ ಬೆಟ್ಟೆಗಳು ಕಂಡು ಬರುತ್ತದೆ. 1875ರಲ್ಲಿ ಬ್ರಿಟಿಷ್ ನಾವಿಕ ಎರನೆಸ್ಟ್ ಗೆಲಿಸ್ ಮೊಟ್ಟ ಮೊದಲ ಬಾರಿಗೆ ಈ ಮರುಭೂಮಿಯಲ್ಲಿ ಹಾದು ಹೋದ ಯುರೋಪಿಯೆನ್ ಆಗಿದ್ದಾರೆ. ಈ ಮರುಭೂಮಿಯಲ್ಲಿ ವರ್ಲ್ಡ ವೈಡ್ ಲೈಫ್ ಫಂಡ್ ನ ಎಕೋ ರಿಜನ್ ಆಗಿದೆ. ಈ ಮರುಭೂಮಿಯಲ್ಲಿ ಗ್ರೇಟ್ ಡೆಸರ್ಟ ಸ್ಕಿಂಕ್ ಮತ್ತು ಸ್ಯಾಂಡಿ ಹಿಲ್ ಡುನಾಲ್ಡ್ ಎಂಬ ಪ್ರಾಣಿ ಕಂಡು ಬರುತ್ತದೆ.

# ಗ್ರೇಟ್ ಬಸಿನ್ ಮರುಭೂಮಿ :
ಈ ಮರುಭೂಮಿಯು ಉತ್ತರ ಅಮೇರಿಕಾದಲ್ಲಿ ವ್ಯಾಪಿಸಿದೆ. ಈ ಮರುಭೂಮಿಯು 492,000 ಕಿ.ಮೀ ವಿಸ್ತೀರ್ಣ ಹೊಂದಿದೆ. ಈ ಮರುಭೂಮಿಯು ನವೆಡಾ, ಕ್ಯಾಲಿಪೋರ್ನಿಯಾ, ಉತ್ತಾ ದೇಶಗಳಿಂದ ಕೊಲೊಡೊ ನದಿಯವರೆಗೆ ವ್ಯಾಪಿಸಿದೆ. ಇದು ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಆಲ್ಟ್ರಿಪ್ಲೆಕ್ಸ್ ಎಂಬ ವಿಶೇಷ ಜಾತಿಯ ಸಸ್ಯವು ಕಂಡು ಬರುತ್ತದೆ. ಸೆಜೆ ಬ್ರಷ್ ಎಂಬುದು ಈ ಮರುಭೂಮಿಯಲ್ಲಿ ಕಂಡುಬರುವ ಪ್ರಮುಖವಾದಂತಹ ಸಸ್ಯವಾಗಿದೆ.

# ಸೈರಿಯನ್ ಮರುಭೂಮಿ :
ಈ ಮರುಭೂಮಿಯು ಮಧ್ಯಪೂರ್ವ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಈ ಮರುಭೂಮಿಯು ಜಗತ್ತಿನ ಅತಿ ದೊಡ್ಡ ಮರುಭೂಮಿಯಾಗಿದೆ. ಇದರ ವಿಸ್ತೀರ್ಣ 520,000 ಆಗಿದೆ. ಈ ಮರುಭೂಮಿಯು ಸೈರಿಯಾ, ಇರಾಕ್, ಜೋಡಾರ್ನ, ಸೌದಿ ಅರೇಬಿಯಾಗಳಲ್ಲಿ ಕಂಡು ಬರುತ್ತದೆ.

#ಮರುಭೂಮಿಯ ಸಸ್ಯಗಳು :
25 ಸೆಮೀಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳು ಮರುಭೂಮಿಯ ಸಸ್ಯಗಳು. ಇದಕ್ಕೆ ಇನ್ನೊಂದು ಹೆಸರು ಕ್ಸಿರೊಫೈಟ್ಸ್. ಬಾಹ್ಯ ಹಾಗೂ ಒಳರಚನೆಯಲ್ಲಿ ಅನೇಕ ಹೊಂದಾಣಿಕೆ, ಮಾರ್ಪಾಟುಗಳು ಕಂಡುಬರುತ್ತವೆ. ಅಧಿಕ ತಾಪಮಾನವನ್ನು ತಡೆಯಲು ಇವುಗಳು ಅನೇಕ ಬಾಹ್ಯ ಹಾಗೂ ಆಂತರಿಕ ಬದಲಾವಣೆಗಳನ್ನು ಹೊಂದಿರುತ್ತವೆ. ಕಳ್ಳಿ ಗಿಡಗಳಂತಹ ಗಿಡಗಳಲ್ಲಿ ನೀರು ಇಂಗುವಿಕೆಯನ್ನು ಕಡಿಮೆಮಾಡಲು ಬಹಳ ಕಡಿಮೆ ಎಲೆಗಳಿರುತ್ತವೆ. ಫ್ರೀಟೊಫೈಟ್ಸ್ ತಮ್ಮ ಅತಿಯಾದ ಉದ್ದ ಬೇರುಗಳಿಂದ ಬಹಳ ಕೆಳ ಮಟ್ಟಕ್ಕೆ ತಲುಪಿ ನೀರನ್ನು ಎಳೆದುಕೊಳ್ಳುವ ಸಾಮರ್ಥ್ಯವಿರುತ್ತದೆ. ಬಹಳ ವರ್ಷಗಳ ಕಾಲಾವಧಿಯಲ್ಲಿ ಜೀವಿಸುವ ಗಿಡಗಳಿಗೆ ರಸಹೀನ ಬಹುವಾರ್ಷಿಕ ಸಸ್ಯಗಳೆಂದು ಕರೆಯಲಾಗಿದೆ. ಇವು ಶುಷ್ಕವಾಗಿರುವ ಮರುಭೂಮಿಯ ಸಸ್ಯಗಳು. ಇವುಗಳಿಗೆ ಮಾಂಸಲದೇಹವಿಲ್ಲಿ. ಇವು ನೀರನ್ನು ದೇಹದಲ್ಲಿ ಶೇಖರಿಸದೆಯೇ ನೇರವಾಗಿ ನೀರಿನ ಆಭಾವವನ್ನು ಎದುರಿಸಿ, ಇತರ ವಿಧಾನಗಳಿಂದ ಹೊಂದಾಣಿಕೆ ಮಾಡಿಕೊಳ್ಳುತ್ತವೆ.

# ಸಸ್ಯಗಳ ಹೊಂದಾಣಿಕೆ :
ಒಟ್ಟಿನಲ್ಲಿ ಮರುಭೂಮಿ ಸಸ್ಯಗಳ ನೂರಾರು ಹೊಂದಾಣಿಕೆಗಳಲ್ಲಿ ಕೆಲವು ಹೀಗಿವೆ: ರಸಭರಿತ ಕಾಂಡ, ಎಲೆ (ಉದಾ; ಕಳ್ಳಿಗಿಡ, ಅಗೇವ್) ; ಎಲೆಗಳಿಲ್ಲದ ಮುಳ್ಳುಗಳಿಂದಾವೃತ ದೇಹ (ಉದಾ; ಕಳ್ಳಿಗಿಡ) ; ಹಸುರು ಕಾಂಡ (ಕ್ಯಾಸ್ಪರಿನಾ, ಮೊಹಲಂಬಿಕಿಯಾ, ಕಳ್ಳಿ ಇತ್ಯಾದಿ) ಮೇಣ (ವ್ಯಾಕ್ಸ್) ದಿಂದಾಗಿ ಹೊಳೆಯುವ ಹೊರಮೈ (ಅಗೇವ್) , ನೀರನ್ನು ಹುಡುಕಿಕೊಂಡು ಆಳಕ್ಕೆ ಇಳಿಯುವ ಬೇರು (ಅಲ್ಹಗೀ), ಅತಿ ಉಷ್ಣ ಹಾಗೂ ಬಿಸಿಲಿನ ಪರಿಸ್ಥಿತಿಯಲ್ಲಿ ಎಲೆಗಳನ್ನು ಸುರಳಿಯಂತೆ ಸುತ್ತಿಕೊಳ್ಳುವ ಅಥವಾ ಉದ್ದಕ‍್ಕೆ ಮಡಚಿಕೊಳ್ಳುವ ಎಲೆಗಳು (ಮರುಭೂಮಿಯ ಹುಲ್ಲುಗಳು), ಬಾಷ್ಪವಿಸರ್ಜನೆಯನ್ನು ಕಡಿಮೆಗೊಳಿಸಲು ಎಲೆಗಳಲ್ಲಿ ಕಡಿಮೆ ಪತ್ರರಂಧ್ರಗಳು, ಇತ್ಯಾದಿ.

* ಎಲಿಫ್ಯಾಂಟ್ ಮರ : ಇದು ಅತಿ ಅಪರೂಪದ ಸಸ್ಯ. ಯು.ಎಸ್.ಎ ದೇಶದಲ್ಲಿ ಬೆಳೆಯುತ್ತದೆ. ಮರದ ಕಾಂಡ ಬಹಳ ದಪ್ಪವಾಗಿದ್ದು ನೀರನ್ನು ಹಿಡಿದುಕೊಳ್ಳುವ ಶಕ್ತಿಯಿದೆ. ಇದರ ಆಕಾರ ಚಿಕ್ಕದಾಗಿದ್ದು ಇದರ ರೆಂಬೆಗಳು ಕಾಂಡಕ್ಕಿಂತ ಚಿಕ್ಕದಾಗಿದೆ. ಇದು ತನ್ನ ಬುಡದಲ್ಲಿ ಹಾಗೂ ಕಾಂಡದಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಮೊಗ್ಗು ಸಣ್ಣ ಹಾಗೂ ಹಳದಿ ವೃತ್ತಾಕಾರದಲ್ಲಿದ್ದು ಅದು ಅರಳಿದ ನಂತರ ಬಿಳಿ ಹಾಗೂ ನಕ್ಷತ್ರಾಕಾರವನ್ನು ಹೊಂದಿರುತ್ತದೆ. ಈ ಗಿಡಗಳ ಎಲ್ಲಾ ತಳಿಗಳು ಬರಗಾಲ ಹಾಗೂ ಅತ್ಯಂತ ಚಳಿಗಾಲದಲ್ಲಿ ಮಾತ್ರ ಎಲೆಗಳನ್ನು ಹೊಂದಿರುವುದಿಲ್ಲ.

* ಆರ್ಗನ್ ಪೈಪ್ ಕಳ್ಳಿಗಿಡ : ಈ ಗಿಡದ ಎಲ್ಲಾ ತಳಿಗಳನ್ನು ಮೆಕ್ಸಿಕೊ ಹಾಗೂ ಯು.ಎಸ್.ಎ ನ ಮರುಭೂಮಿಯಲ್ಲಿ ನೋಡಬಹುದು. ಈ ಕಾಂಡವು ನೇರ ಹಾಗೂ ತೆಳುವಾದ ಕೊಂಬೆಗಳನ್ನು ಹೊಂದಿದೆ. ಇದು ಪೂರ್ಣವಾಗಿ ಬೆಳೆಯಲು ಸುಮಾರು 150 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರದಿಂದ ಬೆಳೆಯುವ ಹಣ್ಣುಗಳು ಕಲ್ಲಂಗಡಿಗಿಂತಲೂ ಸಿಹಿಯಾಗಿರುವುದು. ಈ ಹಣ್ಣುಗಳನ್ನು ಅಮೇರಿಕಾದವರು ತಿನ್ನಲು ಹಾಗೂ ಇದನ್ನು ‍‍‌‌‍‍‍‍‍‍‌ಔಷಧಿಯನ್ನಾಗಿ ಬಳಸುವರು.

* ಡೆಸರ್ಟ್ ಸೇಜ್ : ಇದರ ಎತ್ತರ 2-3 ಮೀಟರ್. ಇದರ ಹೂಗಳು ನೀಲಿ ಬಣ್ಣವನ್ನು ಹೊಂದಿದೆ. ಇದರ ಮುಖ್ಯ ಲಕ್ಷಣವೇನೆಂದರೆ ಇದು ಪೂರ್ತಿಯಾಗಿ ಬೆಳೆದ ನಂತರ ಇದಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಔಷಧಿಯ ಗುಣಗಳೂ ಕೂಡ ಇವೆ. ಇದರ ಕಾಂಡ ಹಾಗೂ ಎಲೆಗಳನ್ನು ಕಾಡಿನ ಜನರು ನೆಗಡಿಗಾಗಿ ಔಷಧಿಯನ್ನಾಗಿ ಬಳಸಿಕೊಂಡರು. ಇದನ್ನು ತಲೆನೋವು, ಹೊಟ್ಟೆನೋವು, ಜ್ವರ, ಹಾಗೂ ಇನ್ನಿತರ ಕಣ್ಣು ನೋವಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.

* ಡೆಸರ್ಟ್ ಮ್ಯಾರಿಗೋಲ್ಡ್ : ಇವು ಆಸ್ಟರ್ ಕುಟುಂಬಕ್ಕೆ ಸೇರಿಸಲಾಗಿದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾಗದ ಯು.ಎಸ್.ಎ ಹಾಗೂ ಮೆಕ್ಸಿಕೊ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ವಾರ್ಷಿಕ ಹಾಗೂ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯಗಳಾಗಿದ್ದು ಇವು ಸುಮಾರು 10 ರಿಂದ 30 ಅಂಗುಲ ಎತ್ತರ ಬೆಳೆಯುತ್ತದೆ. ಇದರ ಹೂಗಳು ಹಳದಿ ಬಣ್ಣ ಇರುವುದರಿಂದ ಇವುಗಳನ್ನು ಮ್ಯಾರಿಗೋಲ್ಡ್ ಎನ್ನಲಾಗುತ್ತದೆ. ಈ ಹೂಗಳು ಬಹಳ ವಿಷಕಾರಿಕ. ಈ ಸಸ್ಯಗಳ ಸೇವನೆಯಿಂದಾಗಿ ಬಹಳ ಕುರಿಗಳು ಸಾವನಪ್ಪಿವೆ.

* ಡೆಸರ್ಟ್ ಲಿಲ್ಲಿ : ಇದರ ಇನ್ನೊಂದು ಹೆಸರು ಹೆಸ್ಪರೋಕ್ಯಾಲಿಸ್. ಇದನ್ನು ಉತ್ತರ ಅಮೇರಿಕಾ, ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಹಾಗೂ ಆರಿಜೋನದ ಮರುಭೂಮೆಯಲ್ಲಿ ಕಾಣಬಹುದು. ಇದರ ಎಲೆಗಳು ಸುಮಾರು ಒಂದು ಅಂಗುಲದಷ್ಟು ಅಗಲವಿದ್ದು ಇನ್ನೂ 8-20 ಅಂಗುಲದಷ್ಟು ಅಗಲ ಬೆಳೆಯಬಹುದು. ಇದಕ್ಕೆ ಒಂದು ಆಳದ ಗಡ್ಡೆ ಇದ್ದು ಆ ಗಡ್ಡೆಯನ್ನು ಆಹಾರವನ್ನಾಗಿ ಅಮೇರಿಕಾದವರು ಬಳಸುತ್ತಾರೆ.[5]

* ಡೆಸರ್ಟ್ ವಿಲ್ಲೋ ಮರ : ಖಿಲೋಪ್ಸಿಸ್ ಎಂದೂ ಕರೆಯುತ್ತಾರೆ. ಇದು ಮೆಕ್ಸಿಕೊ ಹಾಗೂ ಯು.ಎಸ್.ಎನಲ್ಲಿ ಕಾಣುವ ಸೂಕ್ಷ್ಮ, ಸಣ್ಣದಾದ ಪತನಶೀಲ ಹೊದರು. ಇದು ಮೇ ತಿಂಗಳಲ್ಲಿ ಬೆಳೆದು ಸೆಪ್ಟೆಂಬರ್ ತಿಂಗಳವರೆಗೂ ಇರುತ್ತದೆ. ಈ ಹೂವಿನ ಪರಾಗಸ್ಪರ್ಷವನ್ನು ಜೇನುನೊಣ ಮಾಡುತ್ತದೆ. ಇದು ಶುಷ್ಕ ಸ್ಥಿತಿಯನ್ನು ತಡೆಕೊಳ್ಳುವುದು.[6]

* ತಾಳೆ ಜಾತಿಯ ಮರ : ಇದು ಉಷ್ಣವಲಯದ, ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆಯ ಸ್ಥಿತಿಯಲ್ಲಿ ಬೆಳೆಯುವುದು. ಇದು ಅತಿ ಶೀತಲ ಸ್ಥಿತಿಯನ್ನು ತಡೆಯುವುದಿಲ್ಲ. ಇದು ಸುಮಾರು 2600 ತಳಿಗಳನ್ನು ಹೊಂದಿದೆ. ಇದರ ಕಾಂಡವು ಬಹಳ ಉದ್ದವಾಗಿದ್ದು, ಇದರ ಉದ್ದದ ಎಲೆಗಳ ಗೊಂಚಲು ಕಾಂಡದ ತುದಿಯಲ್ಲಿ ಇರುವುದು. ಈ ಮರದಿಂದ ತೆಗೆದ ತೈಲವು ಖಾದ್ಯವಾಗಿದೆ. ಈ ಸಸ್ಯದ ರಸವನ್ನು ಹುದುಗಿಸಿ ಪಾಮ್ ವೈನ್ ತಯಾರಿಸುತ್ತಾರೆ. ಈ ಮರದಿಂದ ಬರುವ ತೆಂಗಿನಗರಿಯಿಂದ ಹಗ್ಗ, ಹಾಸಿಗೆ, ಕುಂಚವನ್ನು ಮಾಡಲಾಗುತ್ತದೆ.

* ಸ್ಯಾಗ್ವರೊ : ಈ ಸಸ್ಯವು ಕಳ್ಳಿ ಗಿಡದ ತಳಿ. ಇದರ ಆಯಸ್ಸು ಸುಮಾರು 150 ವರ್ಷ. ಇದರ ಬೆಳವಣಿಗೆ ಮರುಭೂಮಿಯ ವಾತಾವರಣದ ಮೇಲೆ ಅವಲಂಭಿಸಿರುತ್ತದೆ. ಇದರ ಬೆನ್ನುಹುರಿ ಒಂದು ದಿನಕ್ಕೆ ಸುಮಾರು ಒಂದು ಮಿಲಿ ಮೀಟರ್ನಷ್ಟು ಬೆಳೆಯುವುದು. ಇದರ ಹೂಗಳು ರಾತ್ರಿಯ ಸಮಯದಲ್ಲಿ ಬೆಳೆಯುವುದು. ಇದರಲ್ಲಿ ಬೆಳೆಯುವ ಕೆಂಪು ಹಣ್ಣುಗಳನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಇದರ ಒಂದೊಂದು ಹಣ್ಣುಗಳಲ್ಲಿ ಸುಮಾರು 2000 ಬೀಜಗಳಿದ್ದು ಅವುಗಳ ಪರಾಗಸ್ಪರ್ಷ ಸುಲಭವಾಗಿದೆ.

* ಕಳ್ಳಿಗಿಡ : ಇದು ಸಾಮಾನ್ಯವಾಗಿ ಬೆಳೆಯುವ ಸಸ್ಯವಾಗಿದ್ದು ಇದರ ಎತ್ತರ ಸುಮಾರು 1-10 ಮೀಟರ್. ಇದರ ಬೆನ್ನುಹುರಿಯು ಚುಚ್ಚಿದರೆ ರೋಗನಿರೋಧಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content Copyright protected !!