GKQuizSpardha TimesTechnology

ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 3

Share With Friends

1. ಬಾಹ್ಯ ದತ್ತಾಂಶಗಳನ್ನು ಕಂಪ್ಯೂಟರ್ ರೂಪಕ್ಕೆ ಮಾರ್ಪಡಿಸಿ ರವಾನಿಸುವ ಸಾಧನ ಯಾವುದು?
ಎ. ಮಾಹಿತಿ ಸ್ವೀಕಾರ ಸಾಧನ
ಬಿ. ನಿರ್ಗತ ಸಾಧನ
ಸಿ. ಸ್ಮರಣ ಸಾಧನ
ಡಿ. ಇವು ಯಾವುದೂ ಅಲ್ಲ.

2. ಚುಕ್ಕಿ ಮಾತೃಕೆ ಮುದ್ರಕಗಳನ್ನು ಹೀಗೂ ಕರೆಯುತ್ತಾರೆ?
ಎ.ಶಾಯಿ ಚಿಮ್ಮುವ ಮುದ್ರಕ
ಬಿ. ಲೇಸರ್ ಮುದ್ರಕ
ಸಿ. ವರ್ಣ ಮುದ್ರಕ
ಡಿ. ಒತ್ತು ಮುದ್ರಕ

3. ನಕ್ಷೆ, ಚಿತ್ರಗಳು, ಧ್ವನಿ, ದೃಶ್ಯಾವಳಿಗಳು ಮತ್ತು ಎನಿಮೇಶನ್‍ಗಳು….
ಎ. ಪ್ರದರ್ಶಕ ಗುಣಗಳು
ಬಿ. ಬಹುಮಾಧ್ಯಮ ಘಟಕಗಳು
ಸಿ. ನಿರ್ಗತ ಘಟಕಗಳು
ಡಿ. ಮಾಹಿತಿ ಸ್ವೀಕಾರ ಘಟಕಗಳು

4. ಇವುಗಳಲ್ಲಿ ಯಾವುದು ಗ್ರಾಫಿಕಲ್ ಯೂಸರ್ ಇಂಟರ್‍ಪೇಸ್ ಆಧರಿತ ಕಾರ್ಯನಿರ್ವಹಣಾ ವ್ಯವಸ್ಥೆಗಳಿಗೆ ಅನ್ವಯವಾಗುವುದಿಲ್ಲ?
ಎ. ಸರಳ ಮತ್ತು ಸುಲಭ
ಬಿ.ಚಿತ್ರ ಆಧಾರಿತ
ಸಿ. ಬಹುಕಾರ್ಯ ಸಾಮಥ್ರ್ಯ
ಡಿ. ಅಕ್ಷರ ಸೂಚನೆ ಆಧಾರಿತ

5. ಪೋಲ್ಡರ್ ಒಂದರ ಶಾರ್ಟ್‍ಕಟ್ ಮೂಲಕ……
ಎ. ಆ ಪೋಲ್ಡ್‍ನ್ನು ಕ್ಷಿಪ್ರವಾಗಿ ತೆರೆಯಬಹುದು
ಬಿ. ಆ ಪೋಲ್ಡರ್‍ನ ಇನ್ನೊಂದು ನಕಲಿ ಪ್ರತಿ ಸೃಷ್ಟಿಸಬಹುದು
ಸಿ. ಆ ಪೋಲ್ಡರ್‍ನ್ನು ಕಿಟಕಿಯಿಂದ ಇನ್ನೊಂದಕ್ಕೆ ಸ್ಥಳಾಂತರಿಸಬಹುದು.
ಡಿ. ಆ ಪೋಲ್ಡರನ್ನು ತೆಗೆಯುವುದು ತುಂಬಾ ಕಠಿಣ.

6. ಪಠ್ಯ ರಾಪಿಂಗ್ ಎಂದರೆ…..
ಎ. ಪ್ಯಾರಾಗಳನ್ನು ಸೃಷ್ಟಿಸುವುದು
ಬಿ.ಪಠ್ಯದ ಚಂದ ಹೆಚ್ಚಿಸುವುದು
ಸಿ. ಬೆರಳಚ್ಚು ಮಾಡುವಾಗ ಪಠ್ಯವನ್ನು ಮುಂದಿನ ಸಾಲಿಗೆ ಕೊಂಡೊಯ್ಯುವುದು
ಡಿ. ಪಠ್ಯ ವಿನ್ಯಾಸ ಮಾಡುವುದು

7.ನೂತನ ದಸ್ತಾವೇಜುಗಳನ್ನು ಸೃಷ್ಟಿಸಲು ನೆರವಾಗುವ ಸಂರಕ್ಷಿತ ಸಿದ್ಧ ಮಾದರಿಗಳಿಗೆ ಏನೆಂದು ಕರೆಯುತ್ತಾರೆ?
ಎ.ಖಾಲಿ ದಸ್ತಾವೇಜುಗಳು
ಬಿ. ಖಾಲಿ ಪುಟಗಳು
ಸಿ. ನೀಲ ನಕಾಶಗಳು
ಡಿ. ಟೆಂಪ್ಲೆಟುಗಳು

8. ಒಂದು ಎಕ್ಸೆಲ್ ಕಾರ್ಯಪುಸ್ತಕಕ್ಕೆ ಸಂಬಂಧಿಸಿದಂತೆ ಎಷ್ಟು ಬೇಕಾದರೂ ಹಾಳೆಗಳನ್ನು….
ಎ. ಸೇರಿಸಬಹುದು
ಬಿ. ಅಳಿಸಬಹುದು
ಸಿ. ಮರು ಹೆಸರಿಸಬಹುದು
ಡಿ. ಇವೆಲ್ಲವೂ ಸಾಧ್ಯ

9.ಇವುಗಳಲ್ಲಿ ಯಾವುದು ಎಕ್ಸೆಲ್‍ಗೆ ದತ್ತಾಂಶ ಭರ್ತಿ ಮಾಡುವ ವಿಧಾನವಲ್ಲ?
ಎ. ಭರ್ತಿ ಹಿಡಿಕೆ
ಬಿ. ಸ್ವಯಂ ಭರ್ತಿ
ಸಿ. ಶ್ರೇಣಿ ಭರ್ತಿ
ಡಿ. ಸ್ವಯಂಪೂರ್ತಿ

10. ಪವರ್‍ಪಾಯಿಂಟ್ ಸ್ಲೈಡುಗಳ ಜೊತೆಗಿನ ಟಿಪ್ಪಣಿಗಳು ಸ್ಲೈಡ್ ಪ್ರದರ್ಶನ ಸಂದರ್ಭದಲ್ಲಿ………..
ಎ. ಕಂಪ್ಯೂಟರ್ ಪರದೆಯಲ್ಲಿ ಮಾತ್ರ ಕಾಣಿಸುತ್ತದೆ
ಬಿ. ಪ್ರೊಜೆಕ್ಟ್‍ರ್ ಪರದೆಯಲ್ಲಿ ಕಾಣಿಸುತ್ತದೆ.
ಸಿ. ಕಂಪ್ಯೂಟರ್ ಪರದೆ ಮತ್ತು ಪ್ರೊಜೆಕ್ಟರ್ ಪರದೆಗಳೆರಡರಲ್ಲೂ ಕಾಣಿಸುತ್ತದೆ.
ಡಿ. ಎರಡೂ ಕಡೆ ಕಾಣಿಸುವುದಿಲ್ಲ.

11 .ಸ್ಲೈಡುಗಳಿಗೆ ಟಿಪ್ಪಣಿ ಸೇರಿಸಲು ಈ ನೋಟಗಳನ್ನು ಬಳಸಬೇಕು…..
ಎ. ಸಾಮಾನ್ಯ ನೋಟ
ಬಿ. ಟಿಪ್ಪಣಿ ಪುಟ ನೋಟ
ಸಿ. ಮುದ್ರಣ ಮುನ್ನೋಟ ನೋಟ
ಡಿ. ಸಾಮಾನ್ಯ ನೋಟ ಮತ್ತು ಟಿಪ್ಪಣಿ ನೋಟ

12. ಅಂತರಜಾಲ ಆರಂಭಗೊಂಡ ವರ್ಷ ಯಾವುದು?
ಎ. 1979
ಬಿ. 1965
ಸಿ. 1969
ಡಿ. 1972

13. ಕಂಪ್ಯೂಟರ್ ಜಾಲ ನಿರ್ಮಿಸಲು ಇವುಗಳಲ್ಲಿ ಯಾವುದು ಅಗತ್ಯವಿಲ್ಲ?
ಎ. ಮಾಡೆಮ್
ಬಿ. ಸರ್ವರ್ ಕಂಪ್ಯೂಟರ್
ಸಿ. ಕಕ್ಷಿದಾರ ಕಂಪ್ಯೂಟರ್‍ಗಳು
ಡಿ. ರೂಟರ್

14. ಇವುಗಳಲ್ಲಿ ಗುಂಪಿಗೆ ಸೇರದಿರುವುದು ಯಾವುದು?
ಎ. ಸಾಮಾನ್ಯ ನೋಟ
ಬಿ. ಮುದ್ರಣ ವಿನ್ಯಾಸ ನೋಟ
ಸಿ. ಜಾಲ ವಿನ್ಯಾಸ ನೋಟ
ಡಿ. ಮುದ್ರಣ ಮುನ್ನೋಟ

15. ಒಂದೇ ಕಟ್ಟಡದಲ್ಲಿರುವ ಸಂಸ್ಥೆಯ ಕಂಪ್ಯೂಟರ್‍ಗಳನ್ನು ಬೆಸೆದ ಜಾಲ ಯಾವುದಕ್ಕೆ ಉದಾಹರಣೆ?
ಎ. ಲಾನ್
ಬಿ. ವಾನ್
ಸಿ. ಅಂತರ್‍ಜಾಲ
ಡಿ. ವಿಶ್ವವ್ಯಾಪಿ ಜಾಲ

[ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 2 ]

# ಉತ್ತರಗಳು :
1. ಎ. ಮಾಹಿತಿ ಸ್ವೀಕಾರ ಸಾಧನ
2. ಡಿ. ಒತ್ತು ಮುದ್ರಕ
3. ಬಿ. ಬಹುಮಾಧ್ಯಮ ಘಟಕಗಳು
4. ಡಿ. ಅಕ್ಷರ ಸೂಚನೆ ಆಧಾರಿತ
5. ಎ. ಆ ಪೋಲ್ಡ್‍ನ್ನು ಕ್ಷಿಪ್ರವಾಗಿ ತೆರೆಯಬಹುದು
6. ಸಿ. ಬೆರಳಚ್ಚು ಮಾಡುವಾಗ ಪಠ್ಯವನ್ನು ಮುಂದಿನ ಸಾಲಿಗೆ ಕೊಂಡೊಯ್ಯುವುದು
7. ಡಿ. ಟೆಂಪ್ಲೆಟುಗಳು
8. ಡಿ. ಇವೆಲ್ಲವೂ ಸಾಧ್ಯ
9.  ಭರ್ತಿ ಹಿಡಿಕೆ
10. ಎ. ಕಂಪ್ಯೂಟರ್ ಪರದೆಯಲ್ಲಿ ಮಾತ್ರ ಕಾಣಿಸುತ್ತದೆ
11. ಡಿ. ಸಾಮಾನ್ಯ ನೋಟ ಮತ್ತು ಟಿಪ್ಪಣಿ ನೋಟ
12. ಸಿ. 1969
13. ಎ. ಮಾಡೆಮ್
14. ಡಿ. ಮುದ್ರಣ ಮುನ್ನೋಟ
15. ಎ. ಲಾನ್

 

 

 

 

Leave a Reply

Your email address will not be published. Required fields are marked *

error: Content Copyright protected !!